ಉದ್ಯಾನವನದಲ್ಲಿ ಚಪ್ಪಲಿ ಧರಿಸದೆ ಹಸಿರು ಹುಲ್ಲಿನ ಮೇಲೆ ನಡೆಯುವುದು ಮನಸ್ಸಿಗೆ ನೆಮ್ಮದಿ ನೀಡುವುದಲ್ಲದೇ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಇದು ಒತ್ತಡ ಮತ್ತು ದೇಹದ ನೋವನ್ನು ನಿವಾರಿಸುತ್ತದೆ. ಅದರ ಜೊತೆಗೆ ಹಲವು ಪ್ರಯೋಜನಗಳನ್ನು ಹೊಂದಿದೆ.
-ನೀವು ಉದ್ಯಾನವನದಲ್ಲಿ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವುದರಿಂದ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ. ಪ್ರತಿದಿನ ಸುಮಾರು 30 ನಿಮಿಷಗಳ ಕಾಲ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಿರಿ.
-ಬೆಳಿಗ್ಗೆ ಹುಲ್ಲಿನ ಮೇಲೆ ನಡೆದಾಡುವಾಗ ಸೂರ್ಯ ಬೆಳಕು ನಿಮ್ಮ ಮೇಲೆ ಬಿದ್ದು ವಿಟಮಿನ್ ಡಿ ಸಿಗುತ್ತದೆ. ಇದರಿಂದ ನಿಮ್ಮ ಮೂಳೆಗಳು ಗಟ್ಟಿಯಾಗುತ್ತದೆ.
-ಉದ್ಯಾನವನದಲ್ಲಿ ನಡೆಯುವುದು ಮಾನಸಿಕ ಆರೋಗ್ಯವನ್ನು ಉತ್ತಮವಾಗಿಸುತ್ತದೆ. ಇದು ನಿಮ್ಮ ಮನಸ್ಸಿಗೆ ನೆಮ್ಮದಿ ನೀಡುತ್ತದೆ.
ಹೃದಯ ಸಮಸ್ಯೆ ನಿಯಂತ್ರಣಕ್ಕೆ ಆರೋಗ್ಯಕರ ಡ್ರಿಂಕ್ಸ್….!
-ಇದರಿಂದ ದೇಹದ ಉಷ್ನತೆ ನಿಯಂತ್ರಣದಲ್ಲಿರುತ್ತದೆ. ದೇಹದಲ್ಲಿ ಹಾರ್ಮೋನ್ ಸಮತೋಲನದಲ್ಲಿರುತ್ತದೆ. ದೇಹದ ಎಲ್ಲಾ ಭಾಗಗಳು ಸರಿಯಾಗಿ ಕೆಲಸ ಮಾಡುತ್ತದೆ.
-ಕಾಲಿನ ಬೆರಳುಗಳು ನರಮಂಡಲವನ್ನು ಹೊಂದಿರುತ್ತದೆ. ಇದು ಕಣ್ಣುಗಳ ಕಾರ್ಯವನ್ನು ಉತ್ತೇಜಿಸುತ್ತದೆ. ಹಾಗಾಗಿ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆದರೆ ದೃಷ್ಟಿಯನ್ನು ಸುಧಾರಿಸಬಹುದು.