Kannada Duniya

ಬದಲಾಗುತ್ತಿರುವ ಋತುವಿನಲ್ಲಿ ಮಕ್ಕಳಿಗೆ ಸ್ಟ್ರಾಬೆರಿ ಹಣ್ಣನ್ನು ನೀಡಬಹುದೇ?

ಸ್ಟ್ರಾಬೆರಿ ಆರೋಗ್ಯಕ್ಕೆ ತುಂಬಾ ಉತ್ತಮವಾದ ಹಣ್ಣು. ಇದರಲ್ಲಿ ಅನೇಕ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ತುಂಬಾ ಕೆಂಪಾಗಿರುವ ಕಾರಣ ಇದು ಮಕ್ಕಳನ್ನು ಬಹಳ ಬೇಗನೆ ಆಕರ್ಷಿಸುತ್ತದೆ. ಹಾಗಾಗಿ ಇದನ್ನು ಮಕ್ಕಳಿಗೆ ನೀಡುವುದು ಪ್ರಯೋಜನಕಾರಿಯೇ? ಎಂಬುದನ್ನು ತಿಳಿಯಿರಿ.

ಬದಲಾಗುತ್ತಿರುವ ಹವಾಮಾನದಲ್ಲಿ ಮಕ್ಕಳಿಗೆ ಸ್ಟ್ರಾಬೆರಿ ನೀಡುವುದು ಒಳ್ಳೆಯದು. ಯಾಕೆಂದರೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಬಹುದು.

ಅಲ್ಲದೇ ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಇದರಲ್ಲಿ ಫೈಬರ್ ಅಂಶ ಸಮೃದ್ಧವಾಗಿದ್ದು, ಇದು ಹೊಟ್ಟೆಯ ಆರೋಗ್ಯವನ್ನು ಉತ್ತಮವಾಗಿಡುತ್ತದೆ ಮತ್ತು ಮಲಬದ್ಧತೆ ಸಮಸ್ಯೆಯನ್ನು ತಡೆಯುತ್ತದೆ.

ಸ್ಟ್ರಾಬೆರಿ ಮೆದುಳಿನ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದರಲ್ಲಿರುವ ವಿಟಮಿನ್ ಗಳು ಮೆದುಳಿನ ಕಾರ್ಯ ಸಮರ್ಪಕವಾಗಿ ನಡೆಯುವಂತೆ ಸಹಾಯ ಮಾಡುತ್ತವೆ. ಇದರಿಂದ ಮಕ್ಕಳ ಮೆಮೊರಿ ಪವರ್ ಹೆಚ್ಚಾಗುತ್ತದೆ.

ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವ ಕಾರಣ ಇದು ಹಲ್ಲಿನ ಆರೋಗ್ಯಕ್ಕೂ ಒಳ್ಳೆಯದು. ಇದು ಹಲ್ಲುಗಳನ್ನು ಸೋಂಕುಗಳಿಂದ ಕಾಪಾಡುತ್ತದೆ ಮತ್ತು ಹಲ್ಲುಗಳನ್ನು ಗಟ್ಟಿಗೊಳಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...