Kannada Duniya

ಫಿಟ್ ನೆಸ್ ಬಗ್ಗೆ ಯೋಚಿಸುತ್ತಾ ತಲೆಕೆಡಿಸಿಕೊಂಡಿದ್ದೀರಾ…? ಇದನ್ನು ತಪ್ಪದೇ ಓದಿ….!

ಯಾರೋ ಒಬ್ಬ ತಾರೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವರಂತೆ ಸಣ್ಣಗಾಗಬೇಕು ಎಂದುಕೊಳ್ಳುವುದು ಮೂರ್ಖತನ. ಸ್ವಲ್ಪ ದಪ್ಪಗೆ ಕಾಣಿಸಿದರೂ ಫಿಟ್ ಆಗಿ ಕಾಣಬೇಕು ಎಂದು ಹೇಳುವ ಜಾಹಿರಾತುಗಳು ತೂಕ ಇಳಿಸಲು ಪ್ರತಿಯೊಬ್ಬರನ್ನೂ ಪ್ರೇರೇಪಿಸುತ್ತದೆ.

ಇತ್ತೀಚೆಗೆ ನಡೆದ ಸಂಶೋಧನೆಯೊಂದು ಶೇ.60ರಷ್ಟು ಮಹಿಳೆಯರು ತೂಕ ತಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ದಪ್ಪಗಿರುವವರು ಸದಾ ಸಣ್ಣಗಾಗುವುದರ ಬಗ್ಗೆಯೂ ಸಣ್ಣಗಿರುವವರು ದೇಹತೂಕ ಹೆಚ್ಚಿಸಿಕೊಳ್ಳುವ ಬಗ್ಗೆ ಸದಾ ಚಿಂತಿಸುತ್ತಿರುತ್ತಾರೆ ಎನ್ನುತ್ತದೆ ಈ ಅಧ್ಯಯನ.

ಫಿಟ್ನೆಸ್ ಗೆ ಮಾನದಂಡ ಯಾವುದು ಎಂಬುದನ್ನು ನಿರ್ಧರಿಸುವುದು ಕಷ್ಟ. ಜಾಹೀರಾತು ಇಲ್ಲವೇ ಸಿನೆಮಾ ನಟ ನಟಿಯರನ್ನು ಅನುಕರಿಸುವ ಬದಲು ನೀವು ನಿಮ್ಮ ದೇಹದ ಆರೋಗ್ಯದ ಕುರಿತು ಕಾಳಜಿ ಮಾಡುವುದು ಒಳ್ಳೆಯದು.

ವ್ಯಾಯಾಮ ಮಾಡಿ ನಿಮಗೆ ಆಯಾಸವಾಗಿದ್ದರೆ ಈ ಆಹಾರ ಸೇವಿಸಿ….!

ತೂಕ ಕಳೆದುಕೊಳ್ಳಬೇಕು ಅಥವಾ ಹೆಚ್ಚಿದೆ ಎಂಬ ಮಾನಸಿಕ ವ್ಯಥೆಯನ್ನು ಕೈಬಿಟ್ಟು ನಾನು ಫಿಟ್ ಆಗಿದ್ದೇನೆ, ಆರೋಗ್ಯದಿಂದಿದ್ದೇನೆ ಎಂದುಕೊಂಡರೆ ಸಮಾಜದ ಕೊಂಕು ಇಲ್ಲವೇ ವ್ಯಂಗ್ಯವಾದ ಮಾತುಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯ ಬೀಳುವುದಿಲ್ಲ. ಹಾಗಾಗಿ ಯಾರು ಏನು ಹೇಳುತ್ತಾರೆ ಎಂಬುದರ ಬಗ್ಗೆ ಚಿಂತಿಸುವುದನ್ನು ಬಿಟ್ಟುಬಿಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...