Kannada Duniya

ನೀವು ಮಾಡುವಂತಹ ಈ ತಪ್ಪುಗಳಿಂದ ಮಕ್ಕಳಲ್ಲಿ ಕಬ್ಬಿಣಾಂಶದ ಕೊರತೆ ಉಂಟಾಗುತ್ತದೆಯಂತೆ!

ಪೋಷಕರು ಮಕ್ಕಳ ಆಹಾರದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಯಾಕೆಂದರೆ ಅವರಿಗೆ ಆಹಾರದಿಂದಲೇ ಪೋಷಕಾಂಶಗಳು ಸಿಗುತ್ತದೆ. ಇದು ಅವರ ಬೆಳವಣಿಗೆಗೆ ಸಹಕಾರಿ. ಹಾಗಾಗಿ ಮಕ್ಕಳಲ್ಲಿ ಕಬ್ಬಿಣಾಂಶದ ಕೊರತೆಯಾಗದಂತೆ ನೋಡಿಕೊಳ್ಳಿ. ಆದರೆ ನೀವು ಮಾಡುವಂತಹ ಈ ತಪ್ಪುಗಳಿಂದ ಮಕ್ಕಳಲ್ಲಿ ಕಬ್ಬಿಣಾಂಶದ ಕೊರತೆ ಉಂಟಾಗುತ್ತದೆಯಂತೆ.

ಕೆಲವರು ಮಕ್ಕಳಿಗೆ ಶೀತವಾಗುತ್ತದೆ ಎಂದು ನಿಂಬೆ ಹಣ್ಣನ್ನು ನೀಡುವುದಿಲ್ಲ. ಆದರೆ ಇದರಲ್ಲಿರುವ ವಿಟಮಿನ್ ಸಿ ಕಬ್ಬಿಣಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆಯಂತೆ. ಇದರಿಂದ ಮಕ್ಕಳಲ್ಲಿ ಕೆಂಪು ರಕ್ತಕಣಗಳ ಸಂಖ್ಯೆ ಹೆಚ್ಚಾಗಿ ರಕ್ತಹೀನತೆ ಸಮಸ್ಯೆ ಕಾಡುವುದಿಲ್ಲ.

ಕೆಲವರು ಮಕ್ಕಳಿಗೆ ಹಾಲು ನೀಡಿದರೆ ಉತ್ತಮವೆಂದು ಭಾವಿಸುತ್ತಾರೆ. ಯಾಕೆಂದರೆ ಇದನ್ನು ಸಂಪೂರ್ಣ ಆಹಾರವೆಂಬ ಕಾರಣಕ್ಕೆ ಇದು ಮಕ್ಕಳ ದೇಹಕ್ಕೆ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ ಎಂದು ತಿಳಿಯುತ್ತಾರೆ. ಆದರೆ ಮಕ್ಕಳಿಗೆ ಅತಿಯಾಗಿ ಹಾಲು ನೀಡಿದರೆ ಅವರಲ್ಲಿ ಕಬ್ಬಿಣಾಂಶದ ಕೊರತೆ ಕಂಡುಬರುತ್ತದೆ.

ಹಾಗೇ ಮಕ್ಕಳಿಗೆ ಪಾಲಕ್, ದಾಳಿಂಬೆ, ಬೀಟ್ ರೋಟ್ ನಂತರ ಕಬ್ಬಿಣಾಂಶ ಸಮೃದ್ಧವಾಗಿರುವ ಆಹಾರ ನೀಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...