Kannada Duniya

ನೀವು ಬೆಳಿಗ್ಗೆ ಮಾಡುವಂತಹ ಈ ತಪ್ಪುಗಳಿಂದ ಹೃದಯಾಘಾತ ಸಂಭವಿಸಬಹುದು ಎಚ್ಚರ….!

ಹೃದಯ ನಮ್ಮ ದೇಹದ ಪ್ರಮುಖ ಅಂಗ. ಇದು ನಮ್ಮ ಇಡೀ ದೇಹಕ್ಕೆ ರಕ್ತವನ್ನು ಪೂರೈಕೆ ಮಾಡುತ್ತದೆ. ಆದರೆ ಹೃದಯವನ್ನು ಆರೈಕೆ ಮಾಡುವುದು ಅಗತ್ಯ. ಇಲ್ಲವಾದರೆ ಹೃದಯಾಘಾತ ಸಂಭವಿಸಬಹುದು. ಹಾಗಾಗಿ ನೀವು ಬೆಳಿಗ್ಗೆ ಈ ತಪ್ಪುಗಳನ್ನು ಮಾಡಬೇಡಿ.

ತಜ್ಞರು ತಿಳಿಸಿದ ಪ್ರಕಾರ ಚಳಿಗಾಲದಲ್ಲಿ ಬೆಳಿಗ್ಗೆ ಹೃದಾಯಾಘಾತದ ಅಪಾಯ ಹೆಚ್ಚಾಗಿರುತ್ತದೆಯಂತೆ. ಯಾಕೆಂದರೆ ಚಳಿಗಾಲದಲ್ಲಿ ಹೃದಯದ ರಕ್ತನಾಳಗಳು ಕುಗ್ಗುತ್ತವೆಯಂತೆ. ಇದು ರಕ್ತದ ಹರಿವನ್ನು ತಡೆಯುತ್ತದೆ. ಇದರಿಂದ ರಕ್ತದೊತ್ತಡ ಹೆಚ್ಚಾಗಿ ಹೃದಯದ ಸ್ನಾಯುಗಳ ಮೇಲೆ ಒತ್ತಡ ಬಿದ್ದು ಹೃದಯಾಘಾತ ಸಂಭವಿಸುತ್ತದೆಯಂತೆ.

ಹಾಗಾಗಿ ನೀವು ಚಳಿಗಾಲದಲ್ಲಿ ಬೆಳಿಗ್ಗೆ ಬೇಗನೆ ಎದ್ದೇಳಬೇಡಿ. ಹಾಗೇ ಎದ್ದ ತಕ್ಷಣ ಸ್ವಲ್ಪ ಹೊತ್ತು ಕುಳಿತುಕೊಂಡು ವಿಶ್ರಾಂತಿ ಪಡೆಯಿರಿ. ಇದರಿಂದ ದೇಹ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ. ಹಾಗೇ ಬೆಳಿಗ್ಗೆ ಬೇಗನೆ ವಾಕಿಂಗ್ ಹೋಗಬೇಡಿ., ಸೂರ್ಯನ ಬಿಸಿಲು ಬಂದ ನಂತರ ಹೋಗಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...