
ವಯಸ್ಸಾದಂತೆ ಮುಖದಲ್ಲಿ ನೆರಿಗೆಗಳು ಮೂಡುತ್ತದೆ. ಇದು ನಿಮ್ಮ ಮುಖದ ಸೌಂದರ್ಯವನ್ನು ಕೆಡಿಸುತ್ತದೆ. ಹಾಗಾಗಿ ನೀವು ವಯಸ್ಸಾದಂತೆ ಯಂಗ್ ಆಗಿ ಕಾಣಲು ಪ್ರತಿದಿನ ಈ ಯೋಗಾಸನ ಅಭ್ಯಾಸ ಮಾಡಿ.
ಭುಜಂಗಾಸನ : ಇದು ದೇಹದ ಚರ್ಮ ಬಿಗಿತಗೊಳ್ಳಲು ಸಹಾಯ ಮಾಡುತ್ತದೆ. ಇದು ರಕ್ತವನ್ನು ಶುದ್ಧೀಕರಿಸಲು ಮತ್ತು ದೇಹದಲ್ಲಿ ರಕ್ತದ ಹರಿವನ್ನು ಸುಧಾರಿಸುತ್ತದೆ. ಇದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ.
ನಿಮ್ಮ ಹೊಟ್ಟೆಯ ಮೇಲೆ ಮಲಗಿ ನಿಮ್ಮ ಅಂಗೈಯನ್ನು ಭುಜದ ನೇರಕ್ಕೆ ಕೆಳಗೆ ಇರಿಸಿ ಕೈಗಳ ಮೇಲೆ ಒತ್ತಡ ಹೇರಿ ದೇಹವನ್ನು ಮೇಲಕ್ಕೆತ್ತಿ. ತಲೆಯನ್ನು ಹಿಂದಕ್ಕೆ ಭಾಗಿಸಿ. ಈ ಸ್ಥಾನದಲ್ಲಿ ಕೆಲವು ಸೆಕೆಂಡುಗಳ ಕಾಲ ಇಡಿ.
ಸರ್ವಾಂಗಾಸನ : ಇದು ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಚರ್ಮದ ಹೊಳಪಿಗೆ ಕಾರಣವಾಗುತ್ತದೆ. ಇದು ಕೂದಲಿನ ಬೆಳವಣಿಗೆಗೂ ಉತ್ತಮ.
ಯೋಗ ಚಾಪೆಯ ಮೇಲೆ ಮಲಗಿಕೊಳ್ಳಿ. ನಿಮ್ಮ ಎರಡು ಪಾದಗಳ ಬೆರಳುಗಳನ್ನು ಜೋಡಿಸಿ, ಎರಡೂ ಕಾಲುಗಳನ್ನು ಒಟ್ಟಿಗೆ ಮೇಲಕ್ಕೆ ಎತ್ತಲು ಪ್ರಯತ್ನಿಸಿ.
ಮಡಿಕೆಯನ್ನು ಹೀಗೆ ಇಡುವುದರಿಂದ ಲಕ್ಷ್ಮಿದೇವಿಯ ಅನುಗ್ರಹ ದೊರೆಯುತ್ತದೆಯಂತೆ….!
ಅಂಗೈಗಳಿಂದ ಸೊಂಟವನ್ನು ಹಿಡಿದುಕೊಳ್ಳಿ. ಮತ್ತು ಪಾದಗಳನ್ನು ಮೇಲಕ್ಕೆತ್ತಿ ಮತ್ತು ಎಷ್ಟು ಮೇಲಕ್ಕೆ ಎತ್ತಲೂ ಸಾಧ್ಯವೋ ಅಷ್ಟು ಮೇಲೆ ಎತ್ತಿ. ನಿಮ್ಮ ಇಡೀ ದೇಹದ ಭಾರವು ಭುಜಗಳ ಮೇಲೆ ಮಾತ್ರ ಇರಬೇಕು. ಸ್ವಲ್ಪ ಸಮಯ ಈ ಸ್ಥಾನದಲ್ಲಿ ಇರಿ. ಬಳಿಕ ಕಾಲುಗಳನ್ನು ಹಿಂದಕ್ಕೆ ತಂದು ಮೊದಲಿನ ಸ್ಥಿತಿಗೆ ಬನ್ನಿ.