
ಮಕ್ಕಳು ಶಾಲೆಗೆ ರಜೆ ಇದ್ದರೆ ದಿನವಿಡೀ ಹೊರಗಡೆ ಆಟವಾಡುತ್ತಾರೆ. ಇದರಿಂದ ಅವರಿಗೆ ತುಂಬಾ ಆಯಾಸವಾಗುತ್ತದೆ. ಅವರ ಕಾಲುಗಳ ಮೇಲೆ ಹೆಚ್ಚಿನ ಒತ್ತಡ ಬೀಳುವುದರಿಂದ ಕಾಲುಗಳಲ್ಲಿ ನೋವು ಕಂಡುಬರುತ್ತದೆ. ಹಾಗಾಗಿ ಇದನ್ನು ನಿವಾರಿಸಲು ಈ ಸಲಹೆ ಪಾಲಿಸಿ.
ಮಕ್ಕಳಿಗೆ ಕಾಲು ನೋವು ಕಂಡುಬಂದರೆ 5-10ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಅವರ ಪಾದಗಳನ್ನು ಮುಳುಗಿಸಿಡಿ. ಇದರಿಂದ ಸ್ನಾಯುಗಳು ಸಡಿಲಗೊಳ್ಳುತ್ತದೆ.
ಮಕ್ಕಳ ಕಾಲುನೋವು ನಿವಾರಣೆಯಾಗಲು ಕಾಲುಗಳಿಗೆ ಎಣ್ಣೆ ಮಸಾಜ್ ಮಾಡಿ. ಇದರಿಂದ ಸ್ನಾಯುಗಳು ಸಡಿಲಗೊಳ್ಳುತ್ತದೆ.
ಮಕ್ಕಳ ದೇಹದಲ್ಲಿ ಜಲಸಂಚಯನ ಸರಾಗವಾಗಿದ್ದರೆ ಕಾಲು ನೋವು ನಿವಾರಣೆಯಾಗುತ್ತದೆ. ಹಾಗಾಗಿ ಮಕ್ಕಳಿಗೆ ಸಾಕಷ್ಟು ನೀರನ್ನು ಕುಡಿಸಿರಿ. ರಸಭರಿತ ಹಣ್ಣುಗಳನ್ನು ತಿನ್ನಲು ನೀಡಿ.
ಮಕ್ಕಳು ಆಟವಾಡಿ ಬಂದ ನಂತರ ಲಘು ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಮಾಡಿಸಿ. ಇದು ಸ್ನಾಯುಗಳನ್ನು ಹಿಗ್ಗಿಸುತ್ತದೆ. ಕಾಲುಗಳಲ್ಲಿ ನೋವನ್ನು ಕಡಿಮೆ ಮಾಡುತ್ತದೆ.
ಜಾತಕದಲ್ಲಿ ಈ 3 ಯೋಗಗಳಿದ್ದರೆ ಖ್ಯಾತಿಯನ್ನು ಗಳಿಸುತ್ತೀರಂತೆ…!
ಮಕ್ಕಳ ಮೂಳೆಗಳು ಬಲಗೊಳ್ಳಲು ಸೂರ್ಯನ ಬಿಸಿಲಿನಲ್ಲಿ ಬಿಡಿ. ಇದರಿಂದ ವಿಟಮಿನ್ ಡಿ ಸಿಗುತ್ತದೆ. ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರ ನೀಡಿ.