
ನಿಮ್ಮ ದಿನಚರಿಯಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವುದರ ಮೂಲಕ ದೇಹ ತೂಕ ಇಳಿಸುವ ಪ್ರಕ್ರಿಯೆಯನ್ನು ಸುಲಭವಾಗಿಸಬಹುದು. ಅವು ಯಾವುವೆಂದು ತಿಳಿಯಿರಿ.
ದಿನಕ್ಕೆ ಕನಿಷ್ಠ ಒಂದು ಗಂಟೆ ವಾಕಿಂಗ್ ಮಾಡಿ. ಸ್ಮಾರ್ಟ್ ವಾಚ್ ಧರಿಸುವವರಾದರೆ ದಿನಕ್ಕೆ ಹತ್ತು ಸಾವಿರ ಹೆಜ್ಜೆಗಳಷ್ಟು ನಡೆಯಿರಿ. ಇದರಿಂದ ನಿಮ್ಮ ದೇಹಕ್ಕೆ ಸಾಕಷ್ಟು ವ್ಯಾಯಾಮ ದೊರೆಯುತ್ತದೆ.
ಬೆಳಗಿನ ವೇಳೆ ಅಥವಾ ಎದ್ದಾಕ್ಷಣ ಬೆಚ್ಚಗಿನ ನೀರು ಕುಡಿಯಲು ಮರೆಯದಿರಿ. ಎರಡು ಲೋಟದಷ್ಟು ನೀರು ಕುಡಿಯುವುದು ಬಹಳ ಒಳ್ಳೆಯದು.
ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಹೀಗೆ ಸೇವಿಸಿ….!
ನೀವು ಮಾಡುವ ಕೆಲಸ ತೀವ್ರ ಒತ್ತಡದ್ದಾಗಿದ್ದರೆ ಅಂಥ ಸಂದರ್ಭದಲ್ಲಿ ದೇಹಕ್ಕೂ ಮನಸ್ಸಿಗೂ ವಿಶ್ರಾಂತಿ ನೀಡುವುದು ಬಹಳ ಮುಖ್ಯ. ಇದಕ್ಕಾಗಿ ನೀವು ದಿನದ ಹದಿನೈದು ನಿಮಿಷಗಳನ್ನು ಧ್ಯಾನಕ್ಕಾಗಿ ಮೀಸಲಿಡಿ. ಇದರಿಂದ ಸಾಕಷ್ಟು ಆರಾಮ ದೊರೆಯುತ್ತದೆ. ಡಿಟಾಕ್ಸ್ ಡ್ರಿಂಕ್ಸ್ ಗಳನ್ನು ಸೇವನೆ ಮಾಡುವ ಮೂಲಕ ಅನವಶ್ಯಕ ತ್ಯಾಜ್ಯಗಳನ್ನು ದೇಹದಿಂದ ಹೊರಹಾಕಿ.