Kannada Duniya

ನಿಜವಾಗಿಯೂ ತೂಕ ಹೆಚ್ಚುತ್ತದೆಯೇ ಮಸ್ಕ್ ಮೆಲನ್ ಹಣ‍್ಣು ತಿನ್ನುವುದರಿಂದ….?

ಮಸ್ಕ್ ಮೆಲನ್ ಹಣ‍್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ನೀರಿನಾಂಶ ಹೆಚ್ಚಾಗಿರುತ್ತದೆ. ಇದರಲ್ಲಿ ಅನೇಕ ಖನಿಜಗಳು ಮತ್ತು ಜೀವಸತ್ವಗಳಿವೆ. ಇದರಲ್ಲಿ ಫೈಬರ್ ಅಂಶ ಅಧಿಕವಾಗಿದೆ. ಹಾಗಾಗಿ ಇದನ್ನು ಸೇವಿಸುವುದರಿಂದ ತೂಕ ಹೆಚ್ಚುತ್ತದೆಯೇ? ಇಲ್ಲವೇ ಎಂಬುದನ್ನು ತಿಳಿಯಿರಿ.

ತಜ್ಞರ ಪ್ರಕಾರ, ಮಸ್ಕ್ ಮೆಲನ್ ಹಣ‍್ಣು ನೈಸರ್ಗಿಕವಾದ ಸಕ್ಕರೆಯಂಶವನ್ನು ಹೊಂದಿರುತ್ತದೆ. ಇದು ತೂಕವನ್ನು ಹೆಚ್ಚಿಸುವುದಿಲ್ಲ. ಆದರೆ ಈ ಹಣ್ಣನ್ನು ಅತಿಯಾಗಿ ಸೇವಿಸಿದರೆ ನಿಮ್ಮ ಕ್ಯಾಲೋರಿ ಹೆಚ್ಚಾಗಿ ತೂಕ ಹೆಚ್ಚಾಗಬಹುದು.

Sugar Ill effects: ಆರೋಗ್ಯಕರ ಎಂದು ಸೇವಿಸುವ ‘ಈ ವಸ್ತು’ ಎಣ್ಣೆಗಿಂತ ಅಪಾಯಕಾರಿ…!

ಹಾಗೇ ಮಸ್ಕ್ ಮೆಲನ್ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಬಿ1, ಬಿ6, ಕೆ, ಪೊಟ್ಯಾಶಿಯಂ, ತಾಮ್ರ, ಮೆಗ್ನಿಶಿಯಂ ಮುಂತಾದ ಪೋಷಕಾಂಶಗಳು ಹೇರಳವಾಗಿದೆ. ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ಇದರಿಂದ ನಿಮಗೆ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...