Kannada Duniya

ದೀರ್ಘಕಾಲದವರೆಗೆ ನೆಲ್ಲಿಕಾಯಿಯನ್ನು ಸ್ಟೋರ್ ಮಾಡಿ ಇಡಲು ಈ ವಿಧಾನ ಅನುಸರಿಸಿ…!

ನೆಲ್ಲಿಕಾಯಿ ಯಾವಾಗಲೂ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಇದನ್ನು ಸ್ಟೋರ್ ಮಾಡಿ ಇಡಲು ಆಗುವುದಿಲ್ಲ. ಬೇಗನೆ ಹಾಳಾಗುತ್ತದೆ. ಹಾಗಾಗಿ ಇದನ್ನು ದೀರ್ಘಕಾಲದವರೆಗೆ ಸ್ಟೋರ್ ಮಾಡಿ ಇಡಲು ಈ ವಿಧಾನವನ್ನು ಅನುಸರಿಸಿ.

-ನೆಲ್ಲಿಕಾಯಿ ಬೀಜಗಳನ್ನು ತೆಗೆದು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ನೆಲ್ಲಿಕಾಯಿಯನ್ನು ಹತ್ತಿ ಬಟ್ಟೆಯಲ್ಲಿ ಕಟ್ಟಿ ನಂತರ ಒಂದರಿಂದ ಎರಡು ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಿ. ಅದರ ತೇವಾಂಶ ಹೋದ ಬಳಿಕ ಅದನ್ನು ಬಿಗಿಯಾದ ಪಾತ್ರೆಯಲ್ಲಿ ಮುಚ್ಚಿ ಫ್ರಿಜ್ ನಲ್ಲಿಡಿ.

-ಇದನ್ನು ಬೇಯಿಸುವುದರ ಮೂಲಕ ಹಲವು ದಿನಗಳ ಕಾಲ ಸಂಗ್ರಹಿಸಬಹುದು. ಹಾಗಾಗಿ ಅದರ ಬೀಜಗಳನ್ನು ತೆಗೆದುಕೊಂಡು ನೀರಿನಲ್ಲಿ ಕುದಿಸಿ ಬಿಸಿಲಿನಲ್ಲಿ 2 ದಿನಗಳ ಕಾಲ ಒಣಗಿಸಿ ಬಳಿಕ ಗಾಳಿಯಾಡದ ಬಾಟಲಿನಲ್ಲಿ ಮುಚ್ಚಿಡಿ.

ನೀರು ಹೆಚ್ಚಾಗಿ ಅನ್ನ ಅಂಟಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ…!

-ನೆಲ್ಲಿಕಾಯಿಯನ್ನು ದೀರ್ಘಕಾಲದವರೆಗೆ ಇಡಲು ಅರಶಿನ ಮತ್ತು ವಿನೆಗರ್ ನ್ನು ಬಳಸಬಹುದು. ಒಂದು ಗಾಳಿಯಾಡದ ಬಾಟಲಿನಲ್ಲಿ ಉಪ್ಪು, ಅರಶಿನ ಮತ್ತು ವಿನೆಗರ್ ಮಿಶ್ರಣ ಮಾಡಿ ಬಳಿಕ ನೆಲ್ಲಿಕಾಯಿಯನ್ನು ಕತ್ತರಿಸಿ ಅದನ್ನು ಆ ಬಾಟಲಿನಲ್ಲಿ ಹಾಕಿ ಸ್ವಲ್ಪ ಸಮಯ ಬಿಸಿಲಿನಲ್ಲಿ ಇಟ್ಟು ಆನಂತರ ಫ್ರಿಜ್ ನಲ್ಲಿಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...