Kannada Duniya

ಥೈರಾಯ್ಡ್ ಸಮಸ್ಯೆ ಇರುವವರು ನೆಲಗಡಲೆಯನ್ನು ತಿನ್ನಬಹುದೇ?

ಥೈರಾಯ್ಡ್ ಗ್ರಂಥಿ ನಮ್ಮ ಕತ್ತಿನ ಭಾಗದಲ್ಲಿರುತ್ತದೆ. ಇದು ಹಾರ್ಮೋನ್ ಅನ್ನು ಉತ್ಪತ್ತಿ ಮಾಡುತ್ತದೆ. ಈ ಹಾರ್ಮೋನ್ ನಲ್ಲಿ ವ್ಯತ್ಯಾಸವಾದಾಗ ಥೈರಾಯ್ಡ್ ಸಮಸ್ಯೆ ಕಾಡುತ್ತದೆ. ಹಾಗಾಗಿ ಈ ಸಮಸ್ಯೆ ಇರುವವರು ತಮ್ಮ ಆಹಾರದ ಬಗ್ಗೆ ಕಾಳಜಿವಹಿಸಬೇಕು. ಹಾಗಾದರೆ ಈ ಸಮಸ್ಯೆ ಇರುವವರು ನೆಲಗಡಲೆಯನ್ನು ತಿನ್ನಬಹುದೇ? ಎಂಬುದನ್ನು ತಿಳಿಯಿರಿ.

ನೆಲಗಡಲೆಯಲ್ಲಿ ಪ್ರೋಟೀನ್ ಸಮೃದ್ಧವಾಗಿರುತ್ತದೆ. ಇದರಲ್ಲಿ ಪೊಟ್ಯಾಶಿಯಂ, ಕಬ್ಬಿಣ, ಸತು, ವಿಟಮಿನ್ ಇ ಸೇರಿದಂತೆ ಅನೇಕ ಕೊಬ್ಬಿನಾಮ್ಲಗಳು ಕಂಡುಬರುತ್ತದೆ. ತಜ್ಞರು ತಿಳಿಸಿದ ಪ್ರಕಾರ ಥೈರಾಯ್ಡ್ ಸಮಸ್ಯೆ ಇರುವವರು ನೆಲಗಡಲೆಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಒಂದು ವೇಳೆ ಅತಿಯಾಗಿ ತಿಂದರೆ ಥೈರಾಯ್ಡ್ ಸಮಸ್ಯೆ ಹೆಚ್ಚಾಗುತ್ತದೆಯಂತೆ.

ಅಲ್ಲದೇ ಥೈರಾಯ್ಡ್ ರೋಗಿಗಳು ಗ್ಲುಟೆನ್, ಸಕ್ಕರೆ, ಸಂಸ್ಕರಿಸಿದ ಆಹಾರ, ಆಲ್ಕೋಹಾಲ್ ಮತ್ತು ಕಾಫಿ ಸೇವನೆಯನ್ನು ತಪ್ಪಿಸಿ. ಮತ್ತು ಥೈರಾಯ್ಡ್ ರೋಗಿಗಳು ಪ್ರತಿದಿನ ಉತ್ತಮ ಪ್ರಮಾಣದ ಅಯೋಡಿನ್ , ಪ್ರೋಟೀನ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಆಹಾರವನ್ನು ಸೇವಿಸಬೇಕು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...