
ತೂಕ ಕಳೆದು ಕೊಳ್ಳಬೇಕು ಎಂದುಕೊಂಡಿರುವವರು ಬೆಳಗಿನ ತಿಂಡಿಯ ಬದಲು ತಾಜಾ ಹಣ್ಣುಗಳ ಅಥವಾ ತರಕಾರಿಗಳಿಗೆ ಒಣಹಣ್ಣುಗಳಲ್ಲಿ ಸೇರಿಸಿ ಸ್ಮೂಥಿ ಮಾಡಿ ಕುಡಿಯಬೇಕು. ಇದರಿಂದ ತೂಕ ಇಳಿಸುವುದು ಸುಲಭವಾಗುತ್ತದೆ.
ಹಸಿರು ಸ್ಮೂಥಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದು ದೇಹವನ್ನು ತಂಪಾಗಿರಿಸುತ್ತದೆ ಮತ್ತು ಹೈಡ್ರೀಕರಿಸುತ್ತದೆ. ಈ ಸ್ಮೂಥಿಯನ್ನು ತಯಾರಿಸಲು ಹಸಿ ಸೌತೆಕಾಯಿಯನ್ನು ಕತ್ತರಿಸಿ ನೀರು ಮತ್ತು ಪುದೀನಾ ಎಲೆಗಳೊಂದಿಗೆ ರುಬ್ಬಬೇಕು. ಮಳೆಗಾಲದಲ್ಲಿ ಇದನ್ನು ವಾರಕ್ಕೊಮ್ಮೆ ಕುಡಿದರೆ ಸಾಕು.
ಕಲ್ಲಂಗಡಿಯಿಂದಲೂ ಇದೇ ತೆರನಾದ ಸ್ಮೂಥಿಯನ್ನು ತಯಾರಿಸಬಹುದು. ಕಿವಿ ಇಲ್ಲವೇ ಆ್ಯಪಲ್ ಹಣ್ಣನ್ನು ಕತ್ತರಿಸಿ, ನೆನೆಸಿಟ್ಟ ಬಾದಾಮಿಯೊಂದಿಗೆ ರುಬ್ಬಿ. ದಪ್ಪಗಿನ ಈ ಮಿಶ್ರಣವನ್ನು ನೀರು ಬೆರೆಸದೆ ಕುಡಿದರೆ ಬಹಳ ಹೊತ್ತು ಹೊಟ್ಟೆ ತುಂಬಿದ ಅನುಭವ ನಿಮ್ಮದಾಗುತ್ತದೆ.
ಚಿಯಾ ಬೀಜಗಳು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದು ಹೃದಯ ರಕ್ತನಾಳದ ಕಾಯಿಲೆ ಮತ್ತು ಮಧುಮೇಹದಿಂದ ರಕ್ಷಣೆಯನ್ನು ನೀಡುತ್ತದೆ. ಹಾಗಾಗಿ ನೀವು ತಯಾರಿಸುವ ಸ್ಮೂಥಿಗಳಿಗೆ ಚಿಯಾ ಬೀಜಗಳನ್ನು ಸೇರಿಸಿಕೊಳ್ಳಬಹುದು.
ಈ ಜ್ಯೂಸ್ ಅನ್ನು ಕುಡಿಯುವುದರಿಂದ ನೀವು ಮಳೆಗಾಲದಲ್ಲಿ ಅನಾರೋಗ್ಯಕ್ಕೆ ಒಳಗಾಗುವುದಿಲ್ಲವಂತೆ….!
ಕಿತ್ತಳೆ, ನಿಂಬೆ ಮತ್ತು ಅಗಸೆ ಬೀಜದ ಸ್ಮೂಥಿ ಕೂಡಾ ದೇಹಕ್ಕೆ ಒಳ್ಳೆಯದು. ಕಿತ್ತಳೆಯು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಕ್ಯಾನ್ಸರ್ ವಿರುದ್ದ ರಕ್ಷಣೆಯನ್ನು ನೀಡುತ್ತದೆ. ಅಗಸೆ ಬೀಜಗಳು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.