Kannada Duniya

ತೂಕ ಕಡಿಮೆ ಮಾಡಿಕೊಳ್ಳಲು ಸ್ಮೂಥಿ ಸೇವನೆ ಏಕೆ ಒಳ್ಳೆಯದು ಗೊತ್ತೇ….?

ಆರೋಗ್ಯಕರ ಆಹಾರ ಸೇವನೆಯೊಂದಿಗೆ ದೇಹ ತೂಕ ಇಳಿಸುವುದು ಕಠಿಣವಾದ ಕೆಲಸವೇ ಸರಿ. ಎಷ್ಟೇ ನಿಯಮಗಳನ್ನು ಹೇರಿಕೊಂಡರೂ ಕೆಲವೊಂದರಲ್ಲಿ ವಿಫಲವಾಗಿ ದೇಹತೂಕ ಕಡಿಮೆ ಮಾಡಿಕೊಳ್ಳುವ ನಿರ್ಧಾರ ದೂರವಾಗುತ್ತದೆ. ಸ್ಮೂಥಿಗಳು ನಿಮ್ಮ ನಿರ್ಧಾರ ಅಚಲವಾಗಿ ಉಳಿಯುವಂತೆ ನೋಡಿಕೊಳ್ಳುತ್ತದೆ.

ದೇಹಕ್ಕೆ ಪೋಷಕಾಂಶಗಳ ಕೊರತೆಯಾಗದಂತೆ ನೋಡಿಕೊಳ್ಳುವುದರ ಜೊತೆಗೆ ದೇಹತೂಕವನ್ನು ಕಡಿಮೆ ಮಾಡಲು ಹಣ್ಣುಗಳ ಸ್ಮೂಥಿ ನೆರವಾಗುತ್ತದೆ. ತಾಜಾ ಹಣ್ಣುಗಳ ಸ್ಮೂಥಿ ತಯಾರಿಸುವುದು ಹೇಗೆ…

ಪಪ್ಪಾಯಿ ಹಣ್ಣಿಗೆ ಅಗಸೆ ಬೀಜ ಸೇರಿಸಿ ರುಬ್ಬಿ, ತುಸು ನೀರು ಬೆರೆಸಿ. ಇದು ಜ್ಯೂಸ್ ಗಿಂತ ಗಟ್ಟಿಯಿರಲಿ. ಐಸ್ ಕ್ಯೂಬ್ ಬಳಸಿ, ಐಸ್ ಕ್ರೀಮ್ ರೂಪಕ್ಕೆ ತಂದು ಚಮಚದ ಸಹಾಯದಿಂದ ಸೇವಿಸಿ. ಇದರಿಂದ ಹೆಚ್ಚಿನ ಸಮಯದ ತನಕ ನಿಮ್ಮ ಹೊಟ್ಟೆ ತುಂಬಿದ ಅನುಭವವಾಗುತ್ತದೆ ಮತ್ತು ಹೊಟ್ಟೆಯ ಬೊಜ್ಜು ಕರಗುತ್ತದೆ.

ಸಕ್ಕರೆ ಸೇವನೆ ಹೆಚ್ಚಾದರೆ ಚರ್ಮವನ್ನು ಹಾನಿ ಗೊಳಿಸಬಹುದು ಎಚ್ಚರ…!

ಇದೇ ರೀತಿ ಸೇಬಿನ ಸಿಪ್ಪೆ ತೆಗೆದು ಹೋಳುಗಳಾಗಿ ಮಾಡಿಕೊಳ್ಳಿ. ಇದಕ್ಕೆ ದಾಲ್ಚಿನಿ ಹಾಗು ಚಿಯಾ ಬೀಜಗಳನ್ನು ಹಾಕಿ ಬೆರೆಸಿ. ಮಿಕ್ಸಿಯಲ್ಲಿ ರುಬ್ಬಿ. ದಪ್ಪಗಿರುವಂತೆ ಸೇವಿಸಿ. ಬೆಳಿಗ್ಗೆ ಖಾಲಿ ಹೊಟ್ಟೆಗೆ ಇದನ್ನು ಸೇವಿಸಿದರೆ ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತವೆ ಹಾಗೂ ದೇಹ ತೂಕವೂ ಇಳಿಯುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...