Kannada Duniya

ತುಪ್ಪ ಸೇವಿಸಿದರೆ ಏನಾಗುತ್ತದೆ ಗೊತ್ತಾ ಹೊಟ್ಟೆಯ ಸಮಸ್ಯೆ ಇರುವವರು…?

ತುಪ್ಪ ಆರೋಗ್ಯಕ್ಕೆ ತುಂಬಾ ಉತ್ತಮ.ಇದರಲ್ಲಿ ವಿಟಮಿನ್ ಇ ಕಂಡುಬರುತ್ತದೆ. ಈ ತುಪ್ಪವನ್ನು ಆಯುರ್ವೇದದ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಆದರೆ ಕೆಲವರು ತುಪ್ಪವನ್ನು ಸೇವಿಸಬಾರದು. ಇದರಿಂದ ಅವರಿಗೆ ಆರೋಗ್ಯ ಸಮಸ್ಯೆ ಕಾಡಬಹುದು. ಅವರು ಯಾರೆಂಬುದನ್ನು ತಿಳಿದುಕೊಳ್ಳಿ.

ಹೊಟ್ಟೆಯ ಸಮಸ್ಯೆ ಇರುವವರು ತುಪ್ಪವನ್ನು ಸೇವಿಸಬಾರದು. ಏಕೆಂದರೆ ಇವರು ತುಪ್ಪವನ್ನು ಸೇವಿಸಿದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗುತ್ತದೆ.ತುಪ್ಪ ದೇಹದಲ್ಲಿ ಕಫವನ್ನು ಹೆಚ್ಚಿಸುತ್ತದೆ. ಹಾಗಾಗಿ ಶೀತ, ಕೆಮ್ಮು, ಕಫದ ಸಮಸ್ಯೆ ಇರುವವರು ತುಪ್ಪವನ್ನು ಸೇವಿಸಬಾರದು.

Milk mixed with ghee: ಹಾಲು ಮತ್ತು ತುಪ್ಪನ್ನು ಬೆರೆಸಿ ಕುಡಿದರೆ ಏನಾಗುತ್ತದೆ ಗೊತ್ತಾ?

ಹಾಗೇ ಗರ್ಭಿಣಿಯರು ತುಪ್ಪವನ್ನು ಸೇವಿಸಿದರೆ ಮಗುವಿನ ಬೆಳವಣಿಗೆಗೆ ಒಳ್ಳೆಯದು. ಆದರೆ ಜ್ವರ, ಕಫ, ಶೀತದ ಸಮಸ್ಯೆ ಇರುವಂತಹ ಗರ್ಭಿಣಿಯರು ತುಪ್ಪವನ್ನು ಸೇವಿಸಬೇಡಿ.

ಲಿವರ್ ಸಮಸ್ಯೆ ಇರುವವರು ತುಪ್ಪವನ್ನು ಹೆಚ್ಚು ಸೇವಿಸಬೇಡಿ. ಯಾಕೆಂದರೆ ತುಪ್ಪದ ಅತಿಯಾದ ಸೇವನೆಯಿಂದ ಲಿವರ್ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...