ನಿಮ್ಮ ದೇಹವನ್ನು ಆರೋಗ್ಯವಾಗಿಡಲು ವ್ಯಾಯಾಮ ಮಾಡುವುದು ಬಹಳ ಮುಖ್ಯ. ಆದರೆ ಕೆಲವರಿಗೆ ವ್ಯಾಯಾಮ ಮಾಡುವಾಗ ಸ್ವಲ್ಪ ಹೊತ್ತಿನಲ್ಲೇ ತಲೆನೋವು ಸಮಸ್ಯೆ ಕಾಡುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ಹಾಗಾಗಿ ಇದಕ್ಕೆ ಕಾರಣವೇನೆಂಬುದನ್ನು ತಿಳಿದು ತಲೆನೋವು ಬರದಂತೆ ತಡೆಯಿರಿ.
ನಿರ್ಜಲೀಕರಣ : ದೇಹಕ್ಕೆ ನೀರು ಅತಿ ಅವಶ್ಯಕ, ವ್ಯಾಯಾಮ ಮಾಡುವಾಗ ಸಾಕಷ್ಟು ಬೆವರು ಹೋಗಿ ದೇಹದಲ್ಲಿ ನೀರಿನಾಂಶ ಕಡಿಮೆಯಾಗುತ್ತದೆ. ಇದರಿಂದ ಮೆದುಳಿಗೆ ಆಮ್ಲಜನಕ ಪೂರೈಕೆ ಸರಿಯಾಗಿ ಆಗುವುದಿಲ್ಲ. ಇದರಿಂದ ಮೆದುಳಿನ ಕಾರ್ಯದಲ್ಲಿ ವ್ಯತ್ಯಾಸವಾಗಿ ತಲೆನೋವಿನ ಸಮಸ್ಯೆ ಕಾಡುತ್ತದೆ.
ಅತಿಯಾದ ವ್ಯಾಯಾಮ : ನಾವು ಅತಿಯಾಗಿ ವ್ಯಾಯಾಮ ಮಾಡಿದಾಗ ಆಮ್ಲಜನಕದ ಹರಿವನ್ನು ಹೆಚ್ಚಿಸಲು ತಲೆ ಮತ್ತು ಕತ್ತಿನ ಸ್ನಾಯುಗಳಿಗೆ ಹೆಚ್ಚಿನ ರಕ್ತ ಬೇಕಾಗುತ್ತದೆ. ಈ ಕಾರಣದಿಂದಾಗಿ ರಕ್ತನಾಳಗಳು ಹಿಗ್ಗುತ್ತವೆ. ಆಗ ತಲೆನೋವು ಕಂಡುಬರುತ್ತದೆ.
ನಿದ್ರೆಯ ಕೊರತೆ : ರಾತ್ರಿ ಸರಿಯಾಗಿ ನಿದ್ರೆ ಮಾಡದಿದ್ದರೆ ಬೆಳಿಗ್ಗೆ ವ್ಯಾಯಾಮ ಮಾಡುವಾಗ ತಲೆನೋವಿನ ಸಮಸ್ಯೆ ಕಾಡುತ್ತದೆ. ಹಾಗಾಗಿ ನಿದ್ರೆ ಪೂರ್ಣಗೊಳಿಸಿದ ಬಳಿಕವೇ ವ್ಯಾಯಾಮ ಮಾಡಿ.
ತಲೆನೋವನ್ನು ನಿವಾರಿಸಲು ಜಸ್ಟ್ ಹೀಗೆ ಮಾಡಿ
ಬಿಸಿಲಿನಲ್ಲಿ ವ್ಯಾಯಾಮ : ಹೆಚ್ಚು ಸೂರ್ಯ ಬಿಸಿಲು ಬೀಳುವ ಕಡೆ ನಿಂತು ವ್ಯಾಯಾಮ ಮಾಡುವುದರಿಂದ ಸೂರ್ಯನ ಶಾಖ ಮೆದುಳಿನ ಮೇಲೆ ಬೀಳುತ್ತದೆ. ಇದರಿಂದ ತಲೆನೋವಿನ ಸಮಸ್ಯೆ ಕಾಡುತ್ತದೆ.ಹಾಗಾಗಿ ವ್ಯಾಯಾಮ ಮಾಡುವಾಗ ಉಸಿರನ್ನು ಹಿಡಿದಿಟ್ಟುಕೊಳ್ಳುವ ಬದಲು ದೀರ್ಘವಾಗಿ, ಆಳವಾಗಿ ಉಸಿರಾಡಿ. ಸೀಮಿತ ಸಮಯದವರೆಗೆ ಮಾತ್ರ ವ್ಯಾಯಾಮ ಮಾಡಿ.