Kannada Duniya

ತಡವಾಗಿ ಉಪಹಾರ ಸೇವಿಸುವವರು ಒಮ್ಮೆ ಈ ವಿಚಾರ ತಿಳಿದಿರಿ…!

ಹೆಚ್ಚಿನ ಜನರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತದೆ. ಹಾಗಾಗಿ ನಿಮ್ಮ ತೂಕವನ್ನು ನಿಯಂತ್ರಿಸಲು ಪ್ರಯತ್ನಿಸುವವರು ನಿಮ್ಮ ಉಪಹಾರದ ಬಗ್ಗೆ ಹೆಚ್ಚು ಗಮನಕೊಡಬೇಕು. ಯಾಕೆಂದರೆ ಇದು ತೂಕ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ಹಾಗಾಗಿ ಬೆಳಿಗ್ಗೆ ಉಪಹಾರ ಸೇವಿಸುವಾಗ ಈ ತಪ್ಪು ಮಾಡಬೇಡಿ.

ಬೆಳಿಗ್ಗೆ ನೀವು ತುಂಬಾ ತಡವಾಗಿ ಉಪಹಾರ ಸೇವಿಸಬೇಡಿ. 10 ಗಂಟೆಯೊಳಗೆ ಉಪಹಾರವನ್ನು ಮುಗಿಸಿ, ತುಂಬಾ ತಡವಾದರೆ ಇದರಿಂದ ನಿಮ್ಮ ಹಸಿವು ಹೆಚ್ಚಾಗುತ್ತದೆ. ಇದರಿಂದ ನೀವು ಅತಿಯಾಗಿ ತಿನ್ನಬಹುದು ಮತ್ತು ನಿಮ್ಮ ತೂಕ ಹೆಚ್ಚಳವಾಗುತ್ತದೆ.

ಬೆಳಗ್ಗಿನ ಉಪಹಾರದಲ್ಲಿ ಕೆಲವರು ಮೊಟ್ಟೆಯ ಬಿಳಿಭಾಗವನ್ನು ಮಾತ್ರ ಸೇವಿಸುತ್ತಾರೆ. ಆದರೆ ಹೀಗೆ ಮಾಡುವ ಅವಶ್ಯಕತೆಯಿಲ್ಲ. ದಿನಕ್ಕೆ 2 ಮೊಟ್ಟೆಗಳನ್ನು ಸಂಪೂರ್ಣವಾಗಿ ಸೇವಿಸಿದರೆ ತೂಕ ಹೆಚ್ಚಳವಾಗುವುದಿಲ್ಲ.

Foods for Thyroid: ಥೈರಾಯ್ಡ್ ಸಮಸ್ಯೆಯಿದ್ದರೆ ಈ ಆಹಾರಗಳನ್ನು ಸೇವಿಸಿ…!

ಆದರೆ ಉಪಹಾರದಲ್ಲಿ ಹಣ‍್ಣುಗಳನ್ನು ಸೇವಿಸಬೇಡಿ. ಯಾಕೆಂದರೆ ಹಣ‍್ಣುಗಳಲ್ಲಿ ಕಡಿಮೆ ಕ್ಯಾಲೋರಿ, ಕೊಬ್ಬು, ಪ್ರೋಟೀನ್, ಕಾರ್ಬೋಹೈಡ್ರೇಟ್ ಇರುತ್ತದೆ. ಇದು ಚಯಾಪಚಯ ಕ್ರಿಯೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹಾಗಾಗಿ ಉಪಹಾರದಲ್ಲಿ ಕ್ಯಾಲೋರಿ, ಕೊಬ್ಬು, ಪ್ರೋಟೀನ್, ಕಾರ್ಬೋಹೈಡ್ರೇಟ್ ಇರುವ ಆಹಾರ ಸೇವಿಸಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...