Kannada Duniya

ಡೈವೋರ್ಸ್ ನಿರ್ಧಾರ ತೆಗೆದುಕೊಳ್ಳಲು ಈ ವಿಚಾರಗಳೇ ಕಾರಣವಂತೆ ಮಹಿಳೆಯರು …!

ಸಾಮಾನ್ಯವಾಗಿ ಮಹಿಳೆಯರು ತಮ್ಮ ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆ ಇದ್ದರೂ ಕೂಡ ಅದಕ್ಕೆ ಹೊಂದಿಕೊಂಡು ಹೋಗುತ್ತಾಳೆ. ಯಾಕೆಂದರೆ ಅವಳು ಡೈವೋರ್ಸ್ ನೀಡುವ ನಿರ್ಧಾರ ತೆಗೆದುಕೊಳ್ಳುವುದು ಸುಲಭದ ಮಾತಲ್ಲ ಎಂಬುದು ಆಕೆಗೆ ತಿಳಿದಿದೆ. ಹಾಗಿದ್ದರೂ ಕೂಡ ಆಕೆ ವೈವಾಹಿಕ ಜೀವನಕ್ಕೆ ವಿಚ್ಛೇದನ ನೀಡಲು ಮುಂದಾಗಿದ್ದಾಳೆ ಎಂದರೆ ಅದಕ್ಕೆ ಈ ವಿಚಾರಗಳೇ ಕಾರಣವಂತೆ.

ಹೆ‍ಣ್ಣು ಏನನ್ನ ಬೇಕಾದರೂ ಸಹಿಸಿಕೊಳ್ಳುತ್ತಾಳೆ. ಆದರೆ ಮೋಸವನ್ನು ಮಾತ್ರ ಸಹಿಸುವುದಿಲ್ಲ. ಒಂದು ವೇಳೆ ಅವಳ ಪತಿ ಅವಳಿಗೆ ಮೋಸ ಮಾಡುತ್ತಿರುವುದು ತಿಳಿದರೆ ಆಕೆ ಆ ಸಂಬಂಧವನ್ನು ಮುರಿಯಲು ಮುಂದಾಗುತ್ತಾಳೆ.

ಹಾಗೇ ಮಹಿಳೆ ಸ್ವಾಭಿಮಾನದ ವಿಚಾರದಲ್ಲಿ ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ. ಪತಿ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದರೆ ಅಂತಹ ಸಂಬಂಧವನ್ನು ಅವಳು ಮುರಿಯಲು ಮುಂದಾಗುತ್ತಾಳೆ.

ಮದುವೆಯ ಬಳಿಕ ಪತಿ ಪತ್ನಿಯನ್ನು ಅಡುಗೆ ಮನೆಗೆ ಸೀಮಿತ ಮಾಡಿದರೆ, ಅವಳ ಆಸೆ ಕನಸುಗಳನ್ನು ಈಡೇರಿಸಲು ಮುಂದಾಗದಿದ್ದರೆ ಅಂತಹ ಪತಿಯಿಂದ ವಿಚ್ಛೇದನ ಪಡೆಯುತ್ತಾರೆ.

Divorce:ವಿವಾಹ ವಿಚ್ಚೇದನಕ್ಕೆ ಲೈಂಗಿಕ ಅತೃಪ್ತಿಯೂ ಕಾರಣ..!

ಮದುವೆಯ ಬಳಿಕ ಪತ್ನಿಯ ಮೇಲೆ ಇಡೀ ಸಂಸಾರದ ಜವಾಬ್ದಾರಿಯನ್ನು ಹೋರಿಸಿದರೆ ಆಕೆ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾಳೆ. ಆಗ ಪತಿ ಅವಳನ್ನು ಅರ್ಥಮಾಡಿಕೊಳ್ಳದಿದ್ದಾಗ ಆತನಿಂದ ದೂರಹೋಗಲು ಪತ್ನಿ ಬಯಸುತ್ತಾಳೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...