Kannada Duniya

ಡೆಂಗ್ಯೂ ಜ್ವರದಿಂದ ತ್ವರಿತವಾಗಿ ಚೇತರಿಸಿಕೊಳ್ಳಲು ಈ ವಸ್ತುಗಳನ್ನು ಸೇವಿಸಿ….!

ಇತ್ತೀಚಿನ ದಿನಗಳಲ್ಲಿ ಹಲವು ಜನರಲ್ಲಿ ಡೆಂಗ್ಯೂ ಕಾಯಿಲೆ ಕಂಡುಬರುತ್ತಿದೆ. ಇದು ಸೊಳ್ಳೆಗಳ ಕಡಿತದಿಂದ ಉಂಟಾಗುತ್ತದೆ. ಹಾಗಾಗಿ ಡೆಂಗ್ಯೂ ಜ್ವರದಿಂದ ತಕ್ಷಣ ಚೇತರಿಸಿಕೊಳ್ಳಲು ಈ ವಸ್ತುಗಳನ್ನು ಸೇವಿಸಿ.

ಪಪ್ಪಾಯ ಎಲೆಗಳು: ಇದು ಡೆಂಗ್ಯೂವಿಗೆ ಉತ್ತಮ ಮನೆಮದ್ದಾಗಿದೆ. ಇದು ನಿಮ್ಮ ಪ್ಲೇಟ್ಲೆಟ್ ಸಂಖ್ಯೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಇದರಿಂದ ನೀವು ಡೆಂಗ್ಯೂವಿನಿಂದ ತ್ವರಿತವಾಗಿ ಚೇತರಿಸಿಕೊಳ್ಳಬಹುದು.

ಎಳನೀರು : ಇದು ಉಪ್ಪು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಕುಡಿಯುವುದರಿಂದ ನಿರ್ಜಲೀಕರಣ ಸಮಸ್ಯೆ ಕಾಡುವುದಿಲ್ಲ. ಇದು ನಿಮ್ಮ ದೇಹದ ದೌರ್ಬಲ್ಯವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಇದನ್ನು ಪ್ರತಿದಿನ ಕುಡಿಯಿರಿ.

ಹೂಕೋಸು : ಇದು ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಡೆಂಗ್ಯೂ ಸಮಸ್ಯೆ ಇರುವವರು ಹೂಕೋಸನ್ನು ಸೇವಿಸಿ.

ಸೈಕಲ್ ಸವಾರಿ ಮಾಡಬಾರದು ಈ ಜನರು….!

ಗಿಡಮೂಲಿಕೆ ಚಹಾ : ನೀವು ಡೆಂಗ್ಯೂವಿನಿಂದ ಬಹಳ ಬೇಗನೆ ಚೇತರಿಸಿಕೊಳ್ಳಲು ಗಿಡಮೂಲಿಕೆ ಚಹಾವನ್ನು ಕುಡಿಯಿರಿ. ಇದು ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...