Kannada Duniya

ಜೇನುತುಪ್ಪವನ್ನು ಎಂದಿಗೂ ಈ ರೀತಿ ಸೇವಿಸಬೇಡಿ….!

ಜೇನುತುಪ್ಪದಲ್ಲಿ ಔಷಧೀಯ ಗುಣಗಳಿವೆ. ಹಾಗಾಗಿ ಇದನ್ನು ಬಹಳ ಹಿಂದಿನ ಕಾಲದಿಂದಲೂ ಆಯುರ್ವೇದದಲ್ಲಿ, ಮನೆಮದ್ದುಗಳಲ್ಲಿ ಬಳಸುತ್ತಾರೆ. ಇದು ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ಜೇನುತುಪ್ಪಬನ್ನು ಸರಿಯಾದ ರೀತಿಯಲ್ಲಿ ಬಳಸಿ, ಇಲ್ಲವಾದರೆ ಇದರಿಂದ ಹಾನಿಯಾಗಬಹುದು.

ಜೇನುತುಪ್ಪವನ್ನು ಯಾವಾಗಲೂ ಬಿಸಿ ಆಹಾರ ಮತ್ತು ಬಿಸಿ ನೀರಿನೊಂದಿಗೆ ಮಿಕ್ಸ್ ಮಾಡಿ ಸೇವಿಸಬೇಡಿ. ಇದರಿಂದ ಜೀರ್ಣಕ್ರಿಯೆಯ ಮೇಲೆ ಸಮಸ್ಯೆ ಉಂಟಾಗುತ್ತದೆ.

ಹಾಗೇ ಬಿಸಿ ವಾತಾವರಣದಲ್ಲಿ ಕೆಲಸ ಮಾಡುವವರು ಜೇನುತುಪ್ಪವನ್ನು ಸೇವಿಸಬೇಡಿ. ಯಾಕೆಂದರೆ ಜೇನುತುಪ್ಪ ಉಷ್ಣತೆಯ ಗುಣವನ್ನು ಹೊಂದಿರುವ ಕಾರಣ ಇದನ್ನು ಸೇವಿಸಿದರೆ ನಿಮ್ಮ ದೇಹದ ಉಷ್ಣತೆ ಮತ್ತಷ್ಟು ಹೆಚ್ಚಾಗಿ ಸಮಸ್ಯೆ ಕಾಡುತ್ತದೆ.

ಜೇನುತುಪ್ಪವನ್ನು ತುಪ್ಪ ಮತ್ತು ಮಸಾಲೆ ಪದಾರ್ಥಗಳೊಂದಿಗೆ ಬೆರೆಸಿ ಸೇವಿಸಬೇಡಿ. ಇದರಿಂದ ಇದು ವಿಷವಾಗಿ ಪರಿಣಮಿಸುತ್ತದೆ.

ಅಲ್ಲದೇ ಜೇನುತುಪ್ಪವನ್ನು ವಿಸ್ಕಿ, ರಮ್, ಬ್ರಾಂಡಿ ಅಥವಾ ಸಾಸಿವೆಯೊಂದಿಗೆ ಬೆರೆಸಿ ಸೇವಿಸಬೇಡಿ. ಇದರಿಂದ ಗಂಭೀರ ಅಪಾಯವಾಗುವ ಸಂಭವವಿದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...