Kannada Duniya

ಜೀವಸತ್ವಗಳು ಯಾಕೆ ಬೇಕು ಗೊತ್ತಾ ದೇಹಕ್ಕೆ …?

ದೇಹ ಆರೋಗ್ಯವಾಗಿರಲು ಮತ್ತು ಮನಸ್ಸು ತೀಕ್ಷ್ಣವಾಗಿರಲು ಜೀವಸತ್ವಗಳು ಬೇಕು. ಅದರಲ್ಲೂ ದೇಹದ ಅಂಗಾಂಶಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಕೆಲವು ಜೀವಸತ್ವಗಳು ಅತಿ ಅವಶ್ಯಕ.

ಅದಕ್ಕಾಗಿ ನೀವು ಔಷಧಗಳ ಮೂಲಕ ವಿಟಮಿನ್ ಗಳನ್ನು ಪಡೆಯಬಾರದು . ಅದರಿಂದ ಆರೋಗ್ಯ ಹಾಳಾಗುತ್ತದೆ. ಅದರ ಬದಲು ಹಣ್ಣುಗಳು, ತರಕಾರಿಗಳನ್ನು ಸೇವಿಸುವುದರ ಮೂಲಕ ವಿಟಮಿನ್ ಗಳನ್ನು ಪಡೆದುಕೊಳ್ಳಿ.

ದೇಹದ ಒಟ್ಟಾರೆ ಬೆಳವಣಿಗೆಗೆ ಜೀವಸತ್ವಗಳು ಬೇಕಾಗುತ್ತದೆ. ದೇಹದಲ್ಲಿ ಜೀವಸತ್ವಗಳ ಕೊರತೆಯಿದ್ದರೆ ದೇಹವು ದುರ್ಬಲವಾಗುತ್ತದೆ. ರೋಗಗಳಿಗೆ ಬಲಿಯಾಗುತ್ತದೆ. ಹಾಗಾಗಿ ಈ ವಿಟಮಿನ್ ಗಳನ್ನು ಸೇವಿಸಿ.

ವಿಟಮಿನ್ ಎ ಕಣ್ಣಿನ ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಕ್ಯಾರೆಟ್, ಗೆಣಸು, ಟೊಮೆಟೊ, ಪಾಲಕ, ಬಾಳೆಹಣ್ಣಿಳನಲ್ಲಿ ಸಮೃದ್ಧವಾಗಿದೆ.

ವಿಟಮಿನ್ ಇ ದೇಹ ಮತ್ತು ಚರ್ಮದ ಬೆಳವಣಿಗೆಗೆ ಬಹಳ ಮುಖ್ಯ. ಹಾಗಾಗಿ ಆಹಾರದಲ್ಲಿ ಗೋಧಿ, ಹಸಿರು ತರಕಾರಿಗಳನ್ನು ಸೇವಿಸಿ.

ವಿಟಮಿನ್ ಕೆ ದೇಹದ ಅಂಗಾಂಶಗಳು ಕಾರ್ಯ ನಿರ್ವಹಿಸಲು ಸಹಕಾರಿಯಾಗಿದೆ. ಅದಕ್ಕಾಗಿ ಎಲೆಕೋಸು, ಹಸಿರು ಸೊಪ್ಪುಗಳು, ಪಾಲಕ ಮುಂತಾದವುಗಳನ್ನು ಸೇವಿಸಿ.

ವಿಟಮಿನ್ ಬಿ-1 ದೇಹದ ನರಮಂಡಲವನ್ನು ಸುದಾರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಬಟಾಣಿ, ಸೋಯಾಬೀನ್, ಧಾನ್ಯಗಳು, ಗೋಧಿ, ಮುಂತಾದವುಗಳನ್ನು ಸೇವಿಸಿ.

ವಿಟಮಿನ್ ಸಿ ಇದು ನಿಮ್ಮ ದೇಹಕ್ಕೆ ಬೇಗ ವಯಸ್ಸಾಗುವುದು, ದುರ್ಬಲವಾಗುವುದನ್ನು ತಡೆಯುತ್ತದೆ. ಹಾಗಾಗಿ ನಿಂಬೆ, ದ್ರಾಕ್ಷಿ, ಟೊಮೆಟೊ, ಮುಂತಾದವುಗಳನ್ನು ಸೇವಿಸಿ.

ವಿಟಮಿನ್ ಬಿ7 ಆಹಾರಗಳನ್ನು ಸೇವಿಸುವುದರಿಂದ ಈ ಪ್ರಯೋಜನಗಳು ದೊರೆಯುತ್ತದೆ

ವಿಟಮಿನ್ ಡಿ ಮೂಳೆಗಳ ಬೆಳವಣಿಗೆಗೆ ಸಹಕಾರಿ. ಇದು ಸೂರ್ಯ ಬಿಸಿಲಿನಿಂದ ಸಿಗುತ್ತದೆ. ಮತ್ತು ಸೋಯಾ, ಮೊಟ್ಟೆ, ಬೆಣ್ಣೆಯನ್ನು ಸೇವಿಸಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...