Kannada Duniya

ಜೀರಿಗೆಯನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ ಗೊತ್ತಾ…?

ಜೀರಿಗೆಯನ್ನು ಅಡುಗೆಯಲ್ಲಿ ಸಾಂಬಾರು ಪದಾರ್ಥಗಳನ್ನು ತಯಾರಿಸಲು ಬಳಸುತ್ತಾರೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೇ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಆಯುರ್ವೇದದಲ್ಲಿ ಜೀರಿಗೆಯನ್ನು ಚಿಕಿತ್ಸೆಯಲ್ಲಿ ಬಳಸುತ್ತಾರೆ. ಆದರೆ ಜೀರಿಗೆಯನ್ನು ಪುರುಷರು ಮತ್ತು ಮಹಿಳೆಯರು ಅತಿಯಾಗಿ ಸೇವಿಸಿದರೆ ಈ ಅಡ್ಡಪರಿಣಾಮ ಉಂಟಾಗುತ್ತದೆ.

ಜೀರಿಗೆಯಲ್ಲಿ ಉತ್ಕರ್ಷಣ ನಿರೋಧಕ ಗುಣಗಳಿವೆ. ಇದರಲ್ಲಿ ಫೈಬರ್, ಕಬ್ಬಿಣ, ತಾಮ್ರ, ಕ್ಯಾಲ್ಸಿಯಂ, ಪೊಟ್ಯಾಸಿಯಂ, ಮ್ಯಾಂಗನೀಸ್, ಸತು ಮುಂತಾದ ಪೋಷಕಾಂಶಗಳಿವೆ. ಇದು ಸ್ನಾಯುಗಳು ಅಥವಾ ದೇಹದ ಉರಿಯೂತವನ್ನು ಪರಿಹರಿಸುತ್ತದೆ. ಇದು ದೇಹದಲ್ಲಿರುವ ವಿಷದ ಪದಾರ್ಥಗಳನ್ನು ಹೊರಹಾಕುತ್ತದೆ.

ದೇಹದ ಆಕಾರ ಚೆನ್ನಾಗಿರಲು ಈ ವ್ಯಾಯಾಮ ಮಾಡಿ

ಆದರೆ ಜೀರಿಗೆಯನ್ನು ದಿನಕ್ಕೆ 300 ರಿಂದ 600 ಮಿಲಿಗ್ರಾಂ ಸೇವಿಸಬೇಕು. ಯಾಕೆಂದರೆ ಅತಿಯಾದರೆ ಟೆಸ್ಟೋಸ್ಟೆರಾನ್ ಮಟ್ಟವನ್ನು ನಿಗ್ರಹಿಸುತ್ತದೆ. ಇದರಿಂದ ಪುರುಷರಲ್ಲಿ ಬಂಜೆತನ ಸಮಸ್ಯೆ ಕಾಡುತ್ತದೆ. ಹಾಗೇ ಜೀರಿಗೆಯಲ್ಲಿ ಗರ್ಭಪಾತವನನ್ನು ಪ್ರಚೋದಿಸುವ ಗುಣವಿರುವುದರಿಂದ ಗರ್ಭ ಧರಿಸುವ ಮಹಿಳೆಯರು ಇದನ್ನು ಹೆಚ್ಚಾಗಿ ಸೇವಿಸಬೇಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...