Kannada Duniya

ಜಿಮ್ ಗೆ ಹೋಗದೆ ನಿಮ್ಮ ದೇಹ ತೂಕ ಕಡಿಮೆ ಮಾಡಿಕೊಳ್ಳಬೇಕಾ…?

ದೇಹ ತೂಕ ಇಳಿಸಿಕೊಳ್ಳಲು ಜಿಮ್ ಗೆ ಹೋಗಿ ಬೆವರಿಳಿಸಿಕೊಳ್ಳಬೇಕಿಲ್ಲ. ಅದರ ಬದಲು ದೈನಂದಿನ ದಿನಚರಿ, ಆಹಾರ ಸರಿಯಾಗಿರುವಂತೆ ನೋಡಿಕೊಂಡರೆ ಸಾಕು. ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕವೂ ದೇಹ ತೂಕವನ್ನು ಕಡಿಮೆ ಮಾಡಬಹುದು.

ಸಂಸ್ಕರಣೆ ಮಾಡದ ಆಹಾರಗಳ ಸೇವನೆ ಇವುಗಳ ಪೈಕಿ ಮೊದಲನೆದ್ದು. ಧಾನ್ಯಗಳು, ಹಣ್ಣುಗಳು, ತರಕಾರಿಗಳು ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಪೂರೈಸುತ್ತದೆ.

ಹಸಿವಾಗಿದೆ ಅಥವಾ ರುಚಿಕರವಾಗಿದೆ ಎಂಬ ಕಾರಣಕ್ಕೆ ವಿಪರೀತ ಆಹಾರ ಸೇವನೆ ಮಾಡುವುದು ನೇರವಾಗಿ ದೇಹತೂಕವನ್ನು ಹೆಚ್ಚಿಸುತ್ತದೆ. ಊಟಕ್ಕೆ ದೊಡ್ಡ ಬಟ್ಟಲಿನ ಬದಲು ಸಣ್ಣ ಬೌಲ್ ಬಳಸಿ. ಸ್ವಲ್ಪವಾದರೂ ಸಂತೃಪ್ತಿಯಾಗುವಂತೆ ಜಗಿದು ಜಗಿದು ತಿನ್ನಿ. ಇದು ಕೂಡಾ ದೇಹ ತೂಕ ಕಡಿಮೆ ಮಾಡಲು ಸಹಕಾರಿ.

ಶುಂಠಿಯನ್ನು ಬಳಸಿ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಿ….!

ಪ್ರೊಟೀನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ನಿಮ್ಮದಾಗುತ್ತದೆ. ಪದೇ ಪದೇ ತಿನ್ನುವ ಬಯಕೆಯನ್ನು ಕಡಿಮೆ ಮಾಡುತ್ತದೆ. ಸುಸ್ತಾಗದೆ ತೂಕ ಇಳಿಸಿಕೊಳ್ಳುವುದು ಈಗ ಸುಲಭವಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...