Kannada Duniya

ಚಳಿಗಾಲದಲ್ಲಿ ನಿಮಗೆ ಗಂಟಲು ನೋವಿನ ಸಮಸ್ಯೆ ಕಾಡುತ್ತಿದ್ದರೆ ಈ ಚಹಾ ಕುಡಿಯಿರಿ

ಚಳಿಗಾಲದಲ್ಲಿ ವಾತಾವರಣ ತಂಪಾಗಿರುವ ಕಾರಣ ಹಲವು ರೀತಿಯ ಕಾಯಿಲೆಗಳು ಕಾಡುತ್ತವೆ. ಅದರಲ್ಲೂ ಹೆಚ್ಚಿನ ಜನರಲ್ಲಿ ಗಂಟಲು ನೋವಿನ ಸಮಸ್ಯೆ ಕಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಚಳಿಗಾಲದಲ್ಲಿ ಈ ಚಹಾ ಕುಡಿಯಿರಿ.

ಅರಿಶಿನ ಚಹಾ : ಅರಿಶಿನ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಇದು ಗಂಟಲು ನೋವಿಗೆ ಪರಿಹಾರ ನೀಡುತ್ತದೆ. ಹಾಗಾಗಿ ಈ ಚಹಾವನ್ನು ತಯಾರಿಸಲು ನೀರಿಗೆ ಅರಿಶಿನದ ತುಂಡನ್ನು ಹಾಕಿ ಕುದಿಸಿ ನಂತರ ನಿಂಬೆ ರಸ ಸೇರಿಸಿ ಕುಡಿಯಿರಿ.

ಗ್ರೀನ್ ಟೀ : ಇದರಲ್ಲಿ ಅಮೈನೋ ಆಮ್ಲವಿದೆ. ಇದು ಆ್ಯಂಟಿ ಆಕ್ಸಿಡೆಂಟ್ ಗಳನ್ನು ಹೊಂದಿದ್ದು, ಇದು ಚಳಿಗಾಲದಲ್ಲಿ ಕಾಡುವಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.

ನಿಂಬೆ ಟೀ : ಇದರಲ್ಲಿವಿಟಮಿನ್ ಸಿ ಸಮೃದ್ಧವಾಗಿದೆ. ಹಾಗಾಗಿ ಇದನ್ನು ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ನೀವು ಕಾಯಿಲೆ ಬೀಳುವುದಿಲ್ಲ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...