
ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುತ್ತದೆ. ಹಾಗಾಗಿ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ನಿಮಗೆ ಯಾವುದೇ ಕಾಯಿಲೆಗಳು ಕಾಡಬಾರದಂತಿದ್ದರೆ ಖರ್ಜೂರವನ್ನು ಸೇವಿಸಿ.
ಖರ್ಜೂರ ಉಷ್ಣದ ಗುಣವನ್ನು ಹೊಂದಿದೆ. ಹಾಗಾಗಿ ಚಳಿಗಾಲದಲ್ಲಿ ಖರ್ಜೂರವನ್ನು ಸೇವಿಸಿದರೆ ದೇಹ ಬೆಚ್ಚಗಿಡುತ್ತದೆ. ಇದರಿಂದ ನಿಮಗೆ ಶೀತ, ಕಫದ ಸಮಸ್ಯೆ ಕಾಡುವುದಿಲ್ಲ. ಅಲ್ಲದೇ ಚಳಿಗಾಲದಲ್ಲಿ ರಕ್ತನಾಳಗಳು ಕುಗ್ಗುತ್ತದೆ. ಇದರಿಂದ ರಕ್ತದೊತ್ತಡ ಸಮಸ್ಯೆ ಕಾಡುತ್ತದೆ. ಹಾಗಾಗಿ ಖರ್ಜೂರವನ್ನು ಸೇವಿಸಿದರೆ ಇದರಲ್ಲಿ ಪೊಟ್ಯಾಶಿಯಂ ಇದ್ದು, ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಕಾಲು ಉಳುಕಿದಾಗ ಈ ಮನೆಮದ್ದುಗಳನ್ನು ಬಳಸಿ ನೋಡಿ….!
ಸಾಮಾನ್ಯವಾಗಿ ಚಳಿಗಾಲದಲ್ಲಿ ರಕ್ತಹೀನತೆ ಸಮಸ್ಯೆ ಕಾಡುತ್ತದೆ. ಹಾಗಾಗಿ ನೀವು ಖರ್ಜೂರವನ್ನು ಸೇವಿಸಿ. ಇದರಲ್ಲಿ ಕಬ್ಬಿಣಾಂಶ ಸಮೃದ್ಧವಾಗಿದೆ. ಹಾಗಾಗಿ ಇದು ದೇಹದಲ್ಲಿ ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತಹೀನತೆ ಸಮಸ್ಯೆ ಕಾಡುವುದಿಲ್ಲ.