ಗರ್ಭಾವಸ್ಥೆಯಲ್ಲಿ ಮಹಿಳೆಯರು ಉತ್ತಮ ಆಹಾರವನ್ನು ಸೇವಿಸುವುದು ತುಂಬಾ ಉತ್ತಮ. ಇಲ್ಲವಾದರೆ ಇದರ ಪರಿಣಾಮ ಮಕ್ಕಳ ಮೇಲಾಗುತ್ತದೆ. ಹಾಗಾಗಿ ಯಾವುದೇ ಆಹಾರವನ್ನು ಸೇವಿಸುವಾಗ ಹಾಗೂ ಯಾವುದೇ ಕೆಲಸಗಳನ್ನು ಮಾಡುವಾಗ ತುಂಬಾ ಎಚ್ಚರವಹಿಸಬೇಕು. ಆದರೆ ಗರ್ಭಾವಸ್ಥೆಗೆ ಸಂಬಂಧಪಟ್ಟಂತೆ ಜನರಲ್ಲಿ ಕೆಲವು ತಪ್ಪು ತಿಳುವಳಿಕೆ ಇದೆ. ಹಾಗಾಗಿ ಅದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ.
-ಗರ್ಭಾವಸ್ಥೆಯಲ್ಲಿ ಬೀಜಗಳು ಮತ್ತು ಡೈರಿ ಉತ್ಪನ್ನಗಳನ್ನು ಸೇವಿಸುವುದರಿಂದ ನಿಮ್ಮ ಮಗುವಿಗೆ ಅಲರ್ಜಿ ಸಮಸ್ಯೆ ಕಾಡುತ್ತದೆ ಎಂದು ಹೇಳುತ್ತಾರೆ. ಆದರೆ ಇದು ಸುಳ್ಳು. ಇದು ಮಗುವಿನ ಬೆಳವಣಿಗೆಗೆ ತುಂಬಾ ಉತ್ತಮ.
– ಗರ್ಭಾವಸ್ಥೆಯಲ್ಲಿ ವ್ಯಾಯಾಮ ಮಾಡಿದರೆ ಗರ್ಭಪಾತವಾಗುತ್ತದೆ ಎಂದು ಹೇಳುತ್ತಾರೆ. ಆದರೆ ಇದು ಸುಳ್ಳು. ಗರ್ಭಾವಸ್ಥೆಯಲ್ಲಿ ವ್ಯಾಯಾಮ ಮಾಡಿದರೆ ಬೆನ್ನು ನೋವು, ಕಾಲು ನೋವು ಮತ್ತು ತಲೆನೋವಿನ ಸಮಸ್ಯೆ ದೂರವಾಗುತ್ತದೆ.
-ಗರ್ಭಾವಸ್ಥೆಯಲ್ಲಿ ಕೊಕೊ ಬೆಣ್ಣೆಯನ್ನು ಚರ್ಮಕ್ಕೆ ಹಚ್ಚಿದರೆ ಸ್ಟ್ರೇಚ್ ಮಾರ್ಕ್ಸ್ ಸಮಸ್ಯೆ ಕಾಡಲ್ಲ ಎಂದು ಹೇಳುತ್ತಾರೆ. ಆದರೆ ಇದು ಸುಳ್ಳು, ಗರ್ಭಾವಸ್ಥೆಯಲ್ಲಿ ಚರ್ಮ ವಿಸ್ತರಿಸುವುದರಿಂದ ಸ್ಟ್ರೇಚ್ ಮಾರ್ಕ್ಸ್ ಕಾಣಿಸಿಕೊಳ್ಳುತ್ತದೆ. ಆದರೆ ಹೆರಿಗೆಯ ಬಳಿಕ ಸ್ಟ್ರೇಚ್ ಮಾರ್ಕ್ ನಿವಾರಿಸುವ ಕ್ರೀಂ ಅನ್ನು ಹಚ್ಚಿದರೆ ಅದು ನಿವಾರಣೆಯಾಗುತ್ತದೆ.
ಗರ್ಭಿಣಿಯರಲ್ಲಿ ಬೆಳಿಗ್ಗೆ ಕಾಡುವ ಸುಸ್ತನ್ನು ನಿವಾರಿಸಲು ಈ ಪ್ರಾಣಾಯಾಮವನ್ನು ಅಭ್ಯಾಸ ಮಾಡಿ
-ನಿಮ್ಮ ಮಗುವಿಗೆ ಹೆಚ್ಚು ಕೂದಲಿದ್ದರೆ ತಾಯಿಗೆ ಎದೆಯೂರಿ ಸಮಸ್ಯೆ ಕಾಡುತ್ತದೆ ಎಂದು ಹೇಳುತ್ತಾರೆ. ಆದರೆ ಇದು ಸುಳ್ಳು. ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಎದೆಯೂರಿ ಸಮಸ್ಯೆ ಸಾಮಾನ್ಯವಾಗಿ ಗರ್ಭಿಣಿಯರು ಕಾಡುವ ಒಂದು ಸಮಸ್ಯೆಯಾಗಿದೆ.
-ಗರ್ಭಿಣಿಯರಲ್ಲಿ ಬೆಳಿಗ್ಗೆ ಮಾತ್ರ ವಾಂತಿ ವಾಕರಿಕೆ, ಸುಸ್ತು ಸಮಸ್ಯೆ ಕಾಡುತ್ತದೆ ಎಂದು ಹೇಳುತ್ತಾರೆ. ಇದು ಸುಳ್ಳು. ಗರ್ಭಿಣಿಯರ ದೇಹದಲ್ಲಿ ಹಾರ್ಮೋನ್ ಬದಲಾವಣೆಯಾಗುವುದರಿಂದ ಈ ಸಮಸ್ಯೆ ಯಾವಾಗ ಬೇಕಾದರೂ ಕಾಡಬಹುದು.
-ಗರ್ಭಿಣಿಯರು ತಾಯಿ ಮತ್ತು ಮಗುವಿಗೆ ಸೇರಿದಂತೆ ಹೆಚ್ಚಿಗೆ ತಿನ್ನಬೇಕು ಎಂದು ಹೇಳುತ್ತಾರೆ. ಇದು ತಪ್ಪು. ತಾಯಿ ತನಗೆ ಬೇಕಾದಷ್ಟು ತಿಂದರೆ ಸಾಕು, ಅದರ ಪೋಷಕಾಂಶ ಮಗುವಿಗೆ ಸಿಗುತ್ತದೆ. ಅತಿಯಾಗಿ ಸೇವಿಸಿದರೆ ಅಜೀರ್ಣ ಸಮಸ್ಯೆ ಕಾಡಬಹುದು ಎಚ್ಚರ.