Kannada Duniya

ಗರ್ಭಾವಸ್ಥೆಯಲ್ಲಿ ಹಾರ್ಮೋನ್ ಗಳ ಅಸಮತೋಲನವನ್ನು ತಪ್ಪಿಸಲು ಈ ಬೀಜಗಳನ್ನು ಸೇವಿಸಿ

ಗರ್ಭಾವಸ್ಥೆಯಲ್ಲಿ ಮಹಿಳೆಯರ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತದೆ. ಇದಕ್ಕೆ ಕಾರಣ ಹಾರ್ಮೋನ್ ನಲ್ಲಾಗುವಂತಹ ಬದಲಾವಣೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ಹಾರ್ಮೋನ್ ನಲ್ಲಿ ಅಸಮತೋಲನ ಉಂಟಾಗುವುದನ್ನು ತಪ್ಪಿಸಲು ಈ ಸಲಹೆ ಪಾಲಿಸಿ.

ಅಗಸೆ ಬೀಜಗಳು : ಇದು ದೇಹದಲ್ಲಿನ ಹಾರ್ಮೋನ್ ಅನ್ನು ನಿಯಂತ್ರಿಸುತ್ತದೆ. ಇದರಲ್ಲಿ ಹಲವು ಪೋಷಕಾಂಶಗಳಿದ್ದು, ಇದು ಹಾರ್ಮೋನ್ ಅನ್ನು ಸಮತೋಲನದಲ್ಲಿಡುತ್ತದೆ. ಹಾಗಾಗಿ ಇದನ್ನು ಹುರಿದು ಸೇವಿಸಿ.

ಕುಂಬಳಕಾಯಿ ಬೀಜ : ಇದು ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಕೊಬ್ಬುಗಳು, ವಿಟಮಿನ್ ಇ, ಒಮೆಗಾ 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಇದು ಈಸ್ಟ್ರೋಜನ್ ಹಾರ್ಮೋನ್ ಅನ್ನು ಸಮತೋಲನದಲ್ಲಿಡುತ್ತದೆ.

ಚಿಯಾ ಬೀಜಗಳು : ಇದರಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು, ಕ್ಯಾಲ್ಸಿಯಂ, ಫೈಬರ್ ಮತ್ತು ವಿಟಮಿನ್ ಗಳನ್ನು ಹೊಂದಿರುತ್ತದೆ. ಇದು ಹಾರ್ಮೋನ್ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

ಸೂರ್ಯಕಾಂತಿ ಬೀಜ : ಇದು ದೇಹದಲ್ಲಿ ಥೈರಾಯ್ಡ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನ್ ಗಳನ್ನು ಸಮತೋಲನದಲ್ಲಿಡುತ್ತದೆ. ಮತ್ತು ಇದು ದೇಹದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...