Kannada Duniya

ಕೆಮ್ಮಿನ ಸಮಸ್ಯೆ ದೀರ್ಘಕಾಲ ಕಾಡುತ್ತಿದ್ದರೆ ಎಚ್ಚರ…!

ಕೆಲವೊಮ್ಮೆ ಕೆಮ್ಮು ಸಮಸ್ಯೆ ಒಂದೆರಡು ದಿನಗಳ ತನಕ ಕಾಡಿ ಮತ್ತೆ ಇಲ್ಲವಾಗುತ್ತದೆ. ಇನ್ನು ಕೆಲವೊಮ್ಮೆ ತಿಂಗಳ ತನಕ ಬಿಡದೆ ಕಾಡುತ್ತದೆ. ಇದಕ್ಕೆ ಸೂಕ್ತ ಔಷಧ ಮಾಡದೆ ಹೋದಲ್ಲಿ ಮುಂದೆ ಇದು ದೊಡ್ಡ ಸಮಸ್ಯೆಯನ್ನೇ ತಂದೊಡ್ಡಬಹುದು.

ದೀರ್ಘಕಾಲ ಕಾಡುವ ಕೆಮ್ಮು ಒಂದರಿಂದ ಎರಡು ತಿಂಗಳ ಅವಧಿಯಲ್ಲಿ ನಿಮ್ಮನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಬಿಡುತ್ತದೆ. ಯಾವುದೇ ಔಷಧಗಳು ಇದಕ್ಕೆ ಪರಿಹಾರ ನೀಡುವುದಿಲ್ಲ. ಜ್ವರ ಶೀತ ಕಡಿಮೆಯಾದರೂ ಕಡಿಮೆಯಾಗದೆ ಉಳಿಯುವ ಕೆಮ್ಮುವಿನಿಂದ ಚೇತರಿಸಿಕೊಳ್ಳುವುದು ಸುಲಭದ ಮಾತಲ್ಲ.

ಅತಿಯಾದ ಧೂಮಪಾನ, ಮದ್ಯಪಾನಗಳು ಇದಕ್ಕೆ ಕಾರಣವಿರಬಹುದು. ಅಸ್ತಮಾ ಸಮಸ್ಯೆ ಇರುವವರ ಶ್ವಾಸಕೋಶಕ್ಕೆ ಆಮ್ಲಜನಕದ ಪೂರೈಕೆ ಸರಿಯಾಗಿ ಆಗುವುದಿಲ್ಲ. ಇದರಿಂದ ಕೆಮ್ಮು ಹೆಚ್ಚುತ್ತದೆ. ಆಸ್ತಮಾ ರೋಗಿಗಳಲ್ಲೂ ಒಣ ಹಾಗೂ ಕಫದ ಕೆಮ್ಮುಗಳು ಕಾಣಿಸಿಕೊಳ್ಳುವುದುಂಟು.

Cancer fighting Herbs: ಕ್ಯಾನ್ಸರ್ ತಡೆಗಟ್ಟುವಲ್ಲಿ ಈ ಗಿಡಮೂಲಿಕೆಗಳು ಸಹಕಾರಿಯಂತೆ…!

ದೀರ್ಘ ಕಾಲ ಕಾಡುವ ಕೆಮ್ಮು ಶ್ವಾಸಕೋಶದ ಕ್ಯಾನ್ಸರ್ ಗೂ ಕಾರಣವಾಗಿರಬಹುದು. ಕೆಮ್ಮುವಾಗ ರಕ್ತ ಬರುವುದು ಕೂಡಾ ಇದರ ಲಕ್ಷಣವಿರಬಹುದು. ಹಾಗಾಗಿ ಇಂಥ ಸಂದರ್ಭಗಳಲ್ಲಿ ನಿರ್ಲಕ್ಷ್ಯ ವಹಿಸದೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...