Kannada Duniya

ಕೆಚಪ್ ಅತಿಯಾದ ಸೇವನೆಯಿಂದ ಆಗುವ ಪರಿಣಾಮವೇನು…?

ಕೆಲವರಿಗೆ ಟೊಮೆಟೊ ಕೆಚಪ್ ಎಂದರೆ ಬಲು ಪ್ರಿಯ. ದೋಸೆ, ಚಪಾತಿ ಹೀಗೆ ಪ್ರತಿಯೊಂದಕ್ಕೂ ಕೆಚಪ್ ಹಾಕಿಯೇ ತಿನ್ನುವುದನ್ನು ಇಷ್ಟಪಡುತ್ತಾರೆ.ಇದಕ್ಕೆ ವ್ಯಸನಿ ಆದರೆ ಲಾಭವಾಗುವುದಕ್ಕಿಂತ ನಷ್ಟವೇ ಹೆಚ್ಚು.

ಕೆಚಪ್ ನಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ಇರುವುದಿಲ್ಲ. ಫೈಬರ್ ಅಂಶವಂತೂ ಇಲ್ಲವೇ ಇಲ್ಲ. ಹಾಗಾಗಿ ಇದರ ಅತಿಯಾದ ಸೇವನೆಯಿಂಧ ಹೃದಯದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಸಕ್ಕರೆ ಅಂಶ ಹೆಚ್ಚಿರುವ ಕೆಚಪ್ ನಿಮ್ಮ ದೇಹ ತೂಕ ಹೆಚ್ಚಳಕ್ಕೂ ಕಾರಣವಾಗಬಹುದು. ಅ್ಯಸಿಡಿಟಿ ಸಮಸ್ಯೆ ಇರುವವರು ಇದನ್ನು ಸೇವಿಸದೇ ಇರುವುದೇ ಒಳ್ಳೆಯದು.

ಈ ಆಹಾರಗಳು ನಕಲಿಯೇ? ಅಸಲಿಯೇ? ಎಂಬುದನ್ನು ತಿಳಿಯಿರಿ

ಕಾಲು ನೋವು, ಮೂಳೆ ನೋವು ಇರುವವರು ಕೂಡಾ ಇದರಿಂದ ದೂರವಿರಿ. ಇದು ಸಂಧಿಗಳ ನೋವನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಸೋಡಿಯಂ ಅಂಶ ಮೂತ್ರದ ಕ್ಯಾಲ್ಸಿಯಂ ಪ್ರಮಾಣ ಹೆಚ್ಚುವಂತೆ ಮಾಡುತ್ತದೆ ಹಾಗೂ ಇದರಿಂದ ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಂಡಾವು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...