Kannada Duniya

ಕಣ್ಣುಗಳ ಊತವನ್ನು ಕಡಿಮೆ ಮಾಡಲು ಈ ಮನೆಮದ್ದನ್ನು ಬಳಸಿ….!

ಕೆಲವರಿಗೆ ಬೆಳಿಗ್ಗೆ ಎದ್ದಾಗ ಕಣ್ಣುಗಳು ಊದಿಕೊಂಡಿರುತ್ತದೆ. ಇದರಿಂದ ಅವರ ಮುಖ ವಿಚಿತ್ರವಾಗಿ ಕಾಣುತ್ತದೆ. ರಾತ್ರಿ ಸರಿಯಾಗಿ ನಿದ್ರೆ ಮಾಡದಿದ್ದರೆ ಈ ಸಮಸ್ಯೆ ಕಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಮನಮೆದ್ದುಗಳನ್ನು ಬಳಸಿ.

ಸೌತೆಕಾಯಿ : ಇದು ತಂಪಾಗಿಸುವ ಗುಣವನ್ನು ಹೊಂದಿದೆ. ಇದು ಕಣ್ಣಿನ ಊತವನ್ನು ತೆಗೆದುಹಾಕುತ್ತದೆ. ಹಾಗಾಗಿ ಸೌತೆಕಾಯಿಯನ್ನು ವೃತ್ತಾಕಾರದಲ್ಲಿ ಕತ್ತರಿಸಿ ಕಣ್ಣಿನ ಮೇಲೆ 15 ನಿಮಿಷಗಳ ಕಾಲ ಇಟ್ಟುಕೊಳ್ಳಿ.

ಅಲೋವೆರಾ : ಇದು ತಂಪಾದ ಗುಣವನ್ನು ಹೊಂದಿದೆ. ಹಾಗಾಗಿ ಅಲೋವೆರಾ ವನ್ನು ಕತ್ತರಿಸಿ ಕಣ್ಣುಗಳ ಮೇಲೆ ಇಟ್ಟುಕೊಳ್ಳಿ.

ತೆಂಗಿನೆಣ್ಣೆ : ಇದು ಊತವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಹಾಗಾಗಿ ತೆಂಗಿನೆಣ್ಣೆಯನ್ನು ಕಣ್ಣಿನ ಸುತ್ತಲೂ ಹಚ್ಚಿಕೊಳ್ಳಿ.

ಐಸ್ ಕ್ಯೂಬ್. ಇದು ಕಣ್ಣಿನ ಊತವನ್ನು ಬಹಳ ಬೇಗನೆ ನಿವಾರಿಸುತ್ತದೆ. ಐಸ್ ಕ್ಯೂಬ್ ಅನ್ನು ಬಟ್ಟೆಯಲ್ಲಿ ಸುತ್ತಿ ಕಣ್ಣುಗಳ ಮೇಲೆ ಮಸಾಜ್ ಮಾಡಿ. ಇದರಿಂದ ರಕ್ತಪರಿಚಲನೆ ಸರಾಗವಾಗಿ ಆಗಿ ಊತ ಕಡಿಮೆಯಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...