
ಕಡಲೆಕಾಯಿ ಎಣ್ಣೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಉತ್ತಮ ಕೊಬ್ಬಿನಾಂಶವಿದೆ. ಈ ಎಣ್ಣೆ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದೆ. ಇದು ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ಹಾಗಾಗಿ ಇದನ್ನು ಬಳಸಿದರೆ ಹಲವು ಆರೋಗ್ಯ ಪ್ರಯೋಜನವನ್ನು ಪಡೆಯಬಹುದು.
ಇದು ಆರೋಗ್ಯಕರ ಕೊಬ್ಬಿನಾಂಶವನ್ನು ಹೊಂದಿದೆ. ಹಾಗಾಗಿ ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿವಾರಿಸುತ್ತದೆ. ಇದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ.
ಇದರಲ್ಲಿ ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳಿವೆ. ಇದು ಫ್ರಿ ರಾಡಿಕಲ್ಸ್ ಗಳಿಂದ ದೇಹವನ್ನು ರಕ್ಷಿಸುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ.
ಇದರಲ್ಲಿ ವಿಟಮಿನ್ ಇ ಮತ್ತು ಫೈಟೊಸ್ಟೆರಾಲ್ ಗಳನ್ನು ಹೊಂದಿದೆ. ಇದು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ALERT : ‘ನಿಫಾ ವೈರಸ್’ ಹೇಗೆ ಹರಡುತ್ತದೆ..? ಅದು ಎಷ್ಟು ಅಪಾಯಕಾರಿ ತಿಳಿಯಿರಿ
ಇದರಲ್ಲಿ ಕಡಿಮೆ ಕ್ಯಾಲೋರಿ ಇದೆ. ಹಾಗಾಗಿ ಇದು ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಇದರಿಂದ ತೂಕ ಹೆಚ್ಚಳ ಸಮಸ್ಯೆ ಕಾಡುವುದಿಲ್ಲ.
ಇದರಲ್ಲಿ ವಿಟಮಿನ್ ಇ ಇದ್ದು, ಇದು ಚರ್ಮದ ಹಾನಿಯನ್ನು ನಿವಾರಿಸುತ್ತದೆ. ಇದು ಚರ್ಮವನ್ನು ಟೋನ್ ಆಗಿಸುತ್ತದೆ.