ಓಟ್ಸ್ ಸೇವನೆಯಿಂದ ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇದನ್ನು ಸರಿಯಾದ ರೀತಿಯಲ್ಲಿ ತಿನ್ನದೆ ಹೋದರೆ ದೇಹ ತೂಕ ಕಡಿಮೆಯಾಗುವ ಬದಲು ಹೆಚ್ಚಬಹುದು ಎಂಬ ಆಘಾತಕಾರಿ ಅಂಶ ನಿಮಗೆ ತಿಳಿದಿದೆಯೇ?
ಓಟ್ಸ್ ತಿನ್ನಲು ರುಚಿಕರ ಮಾತ್ರವಲ್ಲ ಇದರಲ್ಲಿ ಪ್ರೊಟೀನ್, ಕಬ್ಬಿಣಾಂಶ ಮತ್ತು ಮ್ಯಾಂಗನೀಸ್ ಗಳು ಸಮೃದ್ಧವಾಗಿವೆ. ಇದರಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರಲ್ಲಿ ಅತಿ ಕಡಿಮೆ ಪ್ರಮಾಣದ ಕ್ಯಾಲೊರಿ ಮತ್ತು ಕೊಬ್ಬಿನಾಂಶವಿದೆ. ತೂಕ ನಿಯಂತ್ರಣಕ್ಕೂ ಇದು ಸಹಕಾರಿ.
ಹಾಗಾಗಿ ಇದನ್ನು ಸರಿಯಾದ ಪ್ರಮಾಣದ ಹಣ್ಣು ಹಾಗೂ ತರಕಾರಿಗಳೊಂದಿಗೆ ಬೆರೆಸಿ ತಿಂದರೆ ಇದು ತೂಕ ನಷ್ಟಕ್ಕೂ ನೆರವಾಗುತ್ತದೆ. ಇದರಲ್ಲಿ ಸಕ್ಕರೆ, ಕಡಲೆಕಾಯಿ, ಬೆಣ್ಣೆ ಬೆರೆಸಿದರೆ ಕ್ಯಾಲೊರಿ ಹೆಚ್ಚುತ್ತದೆ. ಇದರಿಂದ ತೂಕ ಇಳಿಯುವುದು ಅಸಾಧ್ಯ.
ಹೆಚ್ಚಿನ ಪ್ರಮಾಣದ ಎಣ್ಣೆಯುಕ್ತ ಪದಾರ್ಥಗಳು ಮತ್ತು ಪಿಷ್ಟ ತರಕಾರಿಗಳನ್ನು ಇದರ ಜೊತೆ ಸೇವಿಸುವ ತಪ್ಪು ಮಾಡದಿರಿ.ಪೌಷ್ಟಿಕಾಂಶವುಳ್ಳ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಿ ಸೇವಿಸಿದಾಗ ಮಾತ್ರ ಅದರ ಹೆಚ್ಚಿನ ಲಾಭ ನಿಮಗೆ ಸಿಗಲು ಸಾಧ್ಯ.
ಋತುಚಕ್ರದಲ್ಲೂ ವ್ಯಾಯಾಮ ಮಾಡಬಹುದೇ ಅಥವಾ ಇಲ್ಲವೇ…?
ಓಟ್ಸ್ ತಾಜಾ ಹಣ್ಣುಗಳು, ಜೇನುತುಪ್ಪ ಮತ್ತು ಬೀಜಗಳನ್ನು ಸೇವಿಸಿ. ಚಿಟಿಕೆ ಉಪ್ಪು ಬೆರೆಸಿ. ಬೀನ್ಸ್, ಕ್ಯಾರೆಟ್. ಆಲೂಗಡ್ಡೆಯೊಂದಿಗೆ ಒಟ್ಸ್ ಅನ್ನು ಸೇವಿಸಬಹುದು.