
ಇಂದಿನ ಜೀವನಶೈಲಿಯಲ್ಲಿ ಬಹಳಷ್ಟು ಜನರು ಒತ್ತಡವನ್ನು ಅನುಭವಿಸುತ್ತಾರೆ. ದೈನಂದಿನ ಚಟುವಟಿಕೆಗಳಿಂದ ನೀವು ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಹಾಗಾಗಿ ಅದರ ಜೊತೆಗೆ ನಿಮ್ಮ ಆಹಾರದ ಬಗ್ಗೆಯೂ ಗಮನಹರಿಸುವುದು ಅಗತ್ಯ. ಹಾಗಾಗಿ ಈ ಹಣ್ಣುಗಳನ್ನು ಸೇವಿಸಿ.
ಒಣ ಹಣ್ಣುಗಳು : ಈ ಹಣ್ಣಿನಲ್ಲಿ ಸೆಲೆಮಿಯಂ ಅಂಶ ಹೆಚ್ಚಾಗಿರುತ್ತದೆ. ಇದರ ಕೊರತೆಯಿಂದ ವ್ಯಕ್ತಿಯಲ್ಲಿ ಆತಂಕ, ದಣಿವು ಸಮಸ್ಯೆ ಕಾಡುತ್ತದೆ. ಹಾಗಾಗಿ ವೈದ್ಯರು ಪ್ರತಿದಿನ ಒಣ ಹಣ್ಣುಗಳಾದ ವಾಲ್ನಟ್ಸ್, ಬಾದಾಮಿ, ಪಿಸ್ತಾ ಇತ್ಯಾದಿಗಳನ್ನು ಸೇವಿಸುವಂತೆ ಸಲಹೆ ನೀಡುತ್ತಾರೆ. ಇದರಿಂದ ಮನಸ್ಸು ಶಾಂತವಾಗುತ್ತದೆ.
ಬೆರಿ ಹಣ್ಣುಗಳು : ಇದರಲ್ಲಿ ಪೊಟ್ಯಾಶಿಯಂ ಸಮೃದ್ಧವಾಗಿದ್ದು, ಇದು ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತದೆ ಇದು ಒತ್ತಡವನ್ನು ನಿವಾರಿಸುತ್ತದೆ. ಹಾಗಾಗಿ ನೀವು ಒತ್ತಡದಲ್ಲಿದ್ದರೆ ಬೆರಿ ಹಣ್ಣುಗಳನ್ನು ಸೇವಿಸಿ.
ಪ್ರತಿದಿನ ನೆಲ್ಲಿಕಾಯಿ ಸೇವನೆ ಲಿವರ್ ಗೆ ಒಳ್ಳೆಯದೇ?
-ಜೊತೆಗೆ ಡಾರ್ಕ್ ಚಾಕೋಲೇಟ್ ಒತ್ತಡ ನಿವಾರಿಸಲು ಸಹಕಾರಿ. ಇದು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ಹಾಗೇ ಓಟ್ ಮಿಲ್ ಕೂಡ ಮನಸ್ಥಿತಿಯನ್ನು ಸುಧಾರಿಸುವ ಸಿರೊಟೋನಿನ್ ಅನ್ನು ಉತ್ಪಾದಿಸುತ್ತದೆ. ಇದು ಮನಸ್ಸಿಗೆ ಶಾಂತಿ ಮತ್ತು ವಿಶ್ರಾಂತಿಯನ್ನು ನೀಡುತ್ತದೆ.