
ಇತ್ತೀಚಿನ ದಿನಗಳಲ್ಲಿ ಜನರ ಆಹಾರ ಪದ್ದತಿ ಬದಲಾಗಿದ್ದು, ಮಕ್ಕಳಲ್ಲದೆ ಪೋಷಕರು ಸಹ ಜಂಕ್ ಫುಡ್‌ಗಳಿಗೆ ಮಾರು ಹೋಗಿದ್ದಾರೆ. ಒತ್ತಡದ ಜೀವನದಲ್ಲಿ ಆಹಾರ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂದರೆ, ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಕಾಯಿಲೆಗಳು ಮೈಗೂಡಿಬಿಡುತ್ತವೆ. ಹೀಗಾಗಿ ವಾರಕ್ಕೆ ಒಂದು ದಿನ ಉಪವಾಸ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ..
ಉಪವಾಸ ಮಾಡುವುದರಿಂದಾಗುವ ಪ್ರಯೋಜನ:
-ಉಪವಾಸದಿಂದ ದೇಹಕ್ಕೆ ಹೊಸ ಚೈತನ್ಯ ಬರುತ್ತದೆ.
– ಅನೇಕ ಕಾಯಿಲೆಗಳು ಬರದಂತೆ ತಡೆಯುತ್ತದೆ.
-ಉಪವಾಸ ಮಾಡುವುದರಿಂದ ದುಶ್ಚಟ ಗಳಿಂದ ದೂರ ಇರಲು ಸಾಧ್ಯವಾಗುತ್ತದೆ.
-ಜೀರ್ಣಕ್ರಿಯೆಯ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಜೀರ್ಣಕ್ರಿಯೆ ಯ ಕಾರ್ಯ ಉತ್ತಮವಾಗುತ್ತದೆ.
Reheating cooked rice: ಅನ್ನವನ್ನು ಮತ್ತೆ ಬಿಸಿ ಮಾಡಿ ಸೇವಿಸುವುದರಿಂದ ಏನಾಗುತ್ತದೆ ಗೊತ್ತಾ…?
– ಮಲಬದ್ಧತೆ, ಆ್ಯಸಿಡಿಟಿ, ಹುಳಿತೇಗು ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.
-ಉಪವಾಸದಿಂದ ಮಾನಸಿಕ ಆರೋಗ್ಯವು ಸುಸ್ಥಿತಿಯಲ್ಲಿರುತ್ತದೆ.
-ತ್ವಚೆ ಸಂಬಂಧಿಸಿದ ಅನೇಕ ಸಮಸ್ಯೆ ಹೋಗಲಾಡಿಸುತ್ತದೆ.
– ಉಪವಾಸದಿಂದ ದೇಹದ ತೂಕ ಕಡಿಮೆಯಾಗುತ್ತದೆ.