
ನಮ್ಮ ಮೊಣಕಾಲುಗಳು ಬಲವಾಗಿದ್ದರೆ ನಮಗೆ ನಡೆಯಲು ಓಡಾಡಲು ಸಹಾಯವಾಗುತ್ತದೆ. ಆದರೆ ಕೀಲುಗಳು ದುರ್ಬಲವಾದರೆ ನಿಮಗೆ ನಡೆಯಲು ಕಷ್ಟವಾಗುತ್ತದೆ. ಹಾಗಾಗಿ ನಿಮ್ಮ ಕೀಲುಗಳನ್ನು ಬಲಗೊಳಿಸಲು ಪ್ರತಿದಿನ ಈ ವ್ಯಾಯಾಮ ಮಾಡಿ.
ನೀವು ಪ್ರತಿದಿನ ವಾಕಿಂಗ್ ಮಾಡಿ. ನಿಮ್ಮ ಮನೆಯ ಹತ್ತಿರದಲ್ಲಿ ಸ್ವಲ್ಪ ಹೊತ್ತು ವಾಕಿಂಗ್ ಮಾಡಿ. ಇದು ನಿಮ್ಮ ಮನಸ್ಸಿಗೂ ನೆಮ್ಮದಿ ನೀಡುತ್ತದೆ ಮತ್ತು ನಿಮ್ಮ ಕೀಲುಗಳನ್ನು ಬಲಗೊಳಿಸುತ್ತದೆಯಂತೆ.
ಹಾಗೇ ನೀವು ಪ್ರತಿದಿನ ಈಜುವಿಕೆಯನ್ನು ಅಭ್ಯಾಸ ಮಾಡಿ. ಇದು ಕೂಡ ಕೀಲುಗಳನ್ನು ಗಟ್ಟಿಗೊಳಿಸುತ್ತದೆಯಂತೆ. ಇದು ಸ್ನಾಯುಗಳಿಗೂ ಮಸಾಜ್ ನೀಡುತ್ತದೆಯಂತೆ.
ತ್ವಚೆಯ ಕಾಂತಿಯನ್ನು ಹೆಚ್ಚಿಸಲು ದಾಸವಾಳ ಹೂವಿನಿಂದ ಈ ಫೇಸ್ ಪ್ಯಾಕ್ ತಯಾರಿಸಿ ಹಚ್ಚಿ….!
ಅಲ್ಲದೇ ನೀವು ಪ್ರತಿದಿನ ಸೈಕ್ಲಿಂಗ್ ಅಭ್ಯಾಸ ಮಾಡಿ. ಇದು ಮೊಣಕಾಲುಗಳಿಗೆ ಉತ್ತಮ ವ್ಯಾಯಾಮವಾಗಿದೆ. ಇದರಿಂದ ಕೀಲುಗಳಲ್ಲಿ ರಕ್ತಸಂಚಾರ ಸರಾಗವಾಗಿ ಆಗುತ್ತದೆ. ಇದರಿಂದ ಕೀಲುಗಳು ಗಟ್ಟಿಗೊಳ್ಳುತ್ತದೆಯಂತೆ.