
ಹೆಚ್ಚಿನ ಜನರಲ್ಲಿ ತಲೆಹೊಟ್ಟಿನ ಸಮಸ್ಯೆ ಕಾಡುತ್ತದೆ. ಇದು ಕೂದಲುದುರುವಿಕೆಗೆ ಕಾರಣವಾಗುತ್ತದೆ. ಹಾಗಾಗಿ ಈ ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಿ. ಅದಕ್ಕಾಗಿ ಈ ಮನೆಮದ್ದನ್ನು ಬಳಸಿ.
ಬೇವಿನ ಎಲೆಯಲ್ಲಿ ಆ್ಯಂಟಿ ಫಂಗಲ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿವೆ. ಹಾಗಾಗಿ ತಲೆಗೆ ಬೇವಿನ ಎಲೆಯ ರಸವನ್ನು ಹಚ್ಚಿ ನಂತರ ಶಾಂಪೂ ಬಳಸಿ ವಾಶ್ ಮಾಡಿ.
ಹಾಗೇ ಟೀ ಟ್ರೀ ಆಯಿಲ್ ಅನ್ನು ನಿಮ್ಮ ಶಾಂಪೂವಿಗೆ ಮಿಕ್ಸ್ ಮಾಡಿ ಕೂದಲನ್ನು ತೊಳೆಯಿರಿ. ಇದರಿಂದ ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತದೆ.
ಸಲಹೆ ಇಲ್ಲಿದೆ ನೋಡಿ ಮಲಗುವ ಕೋಣೆಯ ವಾಸ್ತು…!
ಅಲ್ಲದೇ ತೆಂಗಿನೆಣ್ಣೆ ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ತೆಂಗಿನೆಣ್ಣೆಯನ್ನು ಬಿಸಿ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ ನಂತರ ತೊಳೆಯಿರಿ.
ಅಲೋವೆರಾದಲ್ಲಿ ಉರಿಯೂತ ನಿವಾರಕ ಗುಣಗಳಿವೆ. ಇದು ನೆತ್ತಿಯ ತೇವಾಂಶವನ್ನು ಕಾಪಾಡುತ್ತದೆ. ಇದರಿಂದ ತಲೆಹೊಟ್ಟಿನ ಸಮಸ್ಯೆ ಕಾಡುವುದಿಲ್ಲ.