
ಮೆದುಳು ನಮ್ಮ ದೇಹದ ಪ್ರಮುಖ ಅಂಗ. ಇದು ನಮ್ಮ ದೇಹದ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮೆದುಳನ್ನು ಆರೋಗ್ಯವಾಗಿ ನೊಡಿಕೊಳ್ಳುವುದು ಅವಶ್ಯಕ. ಆದರೆ ನಮ್ಮ ಕೆಲವು ಕೆಟ್ಟ ಅಭ್ಯಾಸಗಳು ಮೆದುಳನ್ನು ದುರ್ಬಲಗೊಳಿಸುತ್ತದೆಯಂತೆ.
ನಮ್ಮ ಕಳಪೆ ನಿದ್ರೆಯು ಮೆದುಳನ್ನು ಹಾನಿಗೊಳಿಸುತ್ತದೆಯಂತೆ. ನಿದ್ರೆಯಿಂದ ಮೆದುಳಿಗೆ ವಿಶ್ರಾಂತಿ ಸಿಗುತ್ತದೆ. ಆದರೆ ನೀವು ಸರಿಯಾಗಿ ನಿದ್ರೆ ಮಾಡದಿದ್ದರೆ ಮೆದುಳು ದುರ್ಬಲವಾಗುತ್ತದೆಯಂತೆ.
ನೀವು ಅತಿಯಾದ ಶಬ್ದದೊಂದಿಗೆ ಸಂಗೀತವನ್ನು ಕೇಳುವುದು ಕೂಡ ಮೆದುಳನ್ನು ದುರ್ಬಲಗೊಳಿಸುತ್ತದೆ. ಅತಿಯಾದ ಶಬ್ದ ಮೆದುಳಿನ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆಯಂತೆ.
ನೀವು ಅತಿಯಾಗಿ ಒತ್ತಡವನ್ನು ತೆಗೆದುಕೊಳ್ಳವುದು ಕೂಡ ನಿಮ್ಮ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯಂತೆ.
ಮೂಳೆಗಳಲ್ಲಿನ ನೋವನ್ನು ನಿವಾರಿಸಲು ಈ ಆಹಾರವನ್ನು ಸೇವಿಸಿ….!
ಅಲ್ಲದೇ ನೀವು ಹೆಚ್ಚು ಸಕ್ಕರೆಯನ್ನು ಸೇವಿಸುವುದು ಕೂಡ ಮೆದುಳಿನ ಮೇಲೆ ನೇರವಾಗಿ ಪರಿಣಾಮವನ್ನು ಬೀರುತ್ತದೆಯಂತೆ. ಯಾಕೆಂದರೆ ಸಕ್ಕರೆಯಂಶ ಮೆದುಳಿನ ನರಗಳನ್ನು ಹಾನಿಗೊಳಿಸುತ್ತದೆಯಂತೆ.