Kannada Duniya

ಇಲ್ಲಿದೆ ಮನೆಮದ್ದು ಬಿಪಿ ಸಮಸ್ಯೆಗೆ….!

ಪ್ರಸ್ತುತ ದಿನಗಳಲ್ಲಿ ಬಿಪಿ ಸಮಸ್ಯೆ ವಯಸ್ಸಿನ ಹಂಗಿಲ್ಲದೆ ಪ್ರತಿಯೊಬ್ಬರಲ್ಲೂ ಕಾಣಿಸಿಕೊಳ್ಳುತ್ತಿದೆ. ವಿಪರೀತ ಕೆಲಸದ ಒತ್ತಡ, ವಿರಾಮದ ಕೊರತೆ, ಬದಲಾಗುತ್ತಿರುವ ಆಹಾರ ಪದ್ಧತಿಗಳೇ ಇದಕ್ಕೆ ಮುಖ್ಯ ಕಾರಣ.

ಬಿಪಿ ಸಮಸ್ಯೆ ಇರುವವರು ಈ ಕೆಲವು ವಿಷಯಗಳ ಮೇಲೆ ಗಮನ ಹರಿಸುವುದರಿಂದ ಹಲವು ಸಮಸ್ಯೆಗಳನ್ನು ದೂರ ಮಾಡಬಹುದು. ಧಾನ್ಯಗಳನ್ನು ನಿಮ್ಮ ಆಹಾರದಲ್ಲಿ ಹೆಚ್ಚು ಸೇವಿಸಿ. ಧಾನ್ಯಗಳ ಹಿಟ್ಟು ಕೂಡಾ ಹೆಚ್ಚಿನ ಪ್ರಯೋಜನ ನೀಡುತ್ತವೆ.

ಹಣ್ಣು ತರಕಾರಿಗಳನ್ನು ನಿಯಮಿತವಾಗಿ ಸೇವಿಸುವುದನ್ನು ಮರೆಯದಿರಿ. ಬಾರ್ಲಿ ಹಿಟ್ಟು ಅಥವಾ ಬಾರ್ಲಿ ನೀರನ್ನು ಸೇವಿಸುವುದರಿಂದ ಬಿಪಿ ನಿಯಂತ್ರಣ ಸುಲಭವಾಗುತ್ತದೆ. ಅದೇ ರೀತಿ ದಿನಕ್ಕೆ ಒಂದು ಹೊತ್ತು ಚಪಾತಿ ಸೇವನೆ ಮಾಡುವುದರಿಂದಲೂ ಬಿಪಿ ನಿಯಂತ್ರಣಕ್ಕೆ ಬರುತ್ತದೆ.

ಮುಖವನ್ನು ಈ ರೀತಿ ಸ್ವಚ್ಛಗೊಳಿಸುವುದರಿಂದ ಚರ್ಮದ ಸಮಸ್ಯೆಗಳು ನಿವಾರಣೆಯಾಗುತ್ತದೆ

ಓಟ್ಸ್ ಸೇವಿಸಲು ರುಚಿಯಾಗುವುದಿಲ್ಲ ಎನ್ನುವವರು ಅದನ್ನು ತುಸು ಬಿಸಿ ಮಾಡಿ ಮಿಕ್ಸಿಯಲ್ಲಿ ರುಬ್ಬಿ. ಇದರಲ್ಲಿ ಫೈಬರ್ ಹಾಗೂ ಪ್ರೊಟೀನ್ ಅಂಶಗಳು ಸಾಕಷ್ಟಿರುತ್ತವೆ. ಇದು ಕೂಡಾ ಬಿಪಿಯನ್ನು ನಿಯಂತ್ರಣಕ್ಕೆ ತರುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...