Kannada Duniya

ಅರಶಿನ ಹಾಲಿನ ಉಪಯೋಗ ಹಲವು….!

ದೇಹ ತೂಕ ಇಳಿಸಿಕೊಳ್ಳಬೇಕು ಎಂಬ ಯೋಜನೆ ಹಾಕುತ್ತಿದ್ದರೆ ಇಲ್ಲಿ ಕೇಳಿ. ನಿಮ್ಮ ಡಯಟ್ ಪ್ಲಾನ್ ಜೊತೆ ಅರಿಶಿನ ಹಾಲನ್ನು ಸೇರಿಸಿ. ಈ ಹಾಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲ ಹಲವು ಪೋಷಕಾಂಶಗಳಿಂದಲೂ ಸಮೃದ್ಧವಾಗಿದೆ. ಹಾಗಾಗಿ ಇದು ದೇಹ ತೂಕ ಇಳಿಕೆಗೆ ನಿಮಗೆ ನೆರವಾಗುತ್ತದೆ.

ಅರಿಶಿನ ಬೆರೆಸಿದ ಉಗುರು ಬೆಚ್ಚಗಿನ ಹಾಲಿಗೆ ಒಂದಿಂಚು ಗಾತ್ರದ ಬೆಲ್ಲವನ್ನು ಸೇರಿಸಿ ಕುಡಿಯುವುದರಿಂದ ಜೀವನದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಸಾಮಾನ್ಯವಾಗಿ ಅರಶಿನ ಉತ್ತಮ ಬ್ಯಾಕ್ಟೀರಿಯಾ ಗಳನ್ನು ಉತ್ತೇಜಿಸುತ್ತದೆ. ಹಾಗಾಗಿ ಇದರಿಂದ ಮಲಬದ್ಧತೆ ಅಂತ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಇನ್ನು ಬೆಲ್ಲ ಮತ್ತು ಅರಿಶಿನದ ಹಾಲು ಕುಡಿಯುವುದರಿಂದ ಜೀರ್ಣಕ್ರಿಯೆ ಚುರುಕಾಗುತ್ತದೆ ಮತ್ತು ಇದು ಕ್ಯಾಲೋರಿಗಳನ್ನು ಸುಡುತ್ತದೆ. ನಿರಂತರವಾಗಿ ಹಾಗೂ ನಿಯಮಿತವಾಗಿ ಈ ಹಾಲನ್ನು ಕುಡಿಯುತ್ತಾ ಬಂದರೆ ನೀವು ದೇಹ ತೂಕ ಕಳೆದುಕೊಳ್ಳುವುದು ಸುಲಭವಾಗುತ್ತದೆ.

ಪದೇ ಪದೇ ನಿಮ್ಮ ಆರೋಗ್ಯ ಕೈ ಕೊಡ್ತಾ ಇದಿಯಾ…ಇದನ್ನು ಓದಿ…!

ನೀವು ಯಾವುದೇ ದೌರ್ಬಲ್ಯದಿಂದ ಬಳಲುತ್ತಿದ್ದರು ನಿಮ್ಮ ಸಮಸ್ಯೆಯನ್ನು ಈ ಹಾಲು ದೂರ ಮಾಡುತ್ತದೆ. ಮಕ್ಕಳಿಗೆ ಪದೇ ಪದೇ ಕಾಡುವ ಶೀತ ಹಾಗೂ ಜ್ವರದ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಅದರಲ್ಲೂ ಚಳಿಗಾಲದಲ್ಲಿ ಪದೇ ಪದೇ ಕಾಡುವ ಕೆಮ್ಮು ಹಾಗೂ ಶೀತಕ್ಕೆ ಇದು ಹೇಳಿ ಮಾಡಿಸಿದ ಔಷದ.
ಇವೆರಡರಲ್ಲೂ ಇರುವ ಕ್ಯಾಲ್ಸಿಯಂ ಅಂಶ ನಿಮ್ಮ ಮೂಳೆಗಳ ದುರ್ಬಲತೆಯನ್ನು ನಿವಾರಿಸಿ ಕೀಲು ನೋವಿನ ಸಮಸ್ಯೆಯಿಂದಲೂ ಮುಕ್ತಿ ನೀಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...