Kannada Duniya

ಅತಿಯಾಗಿ ಪಾನ್ ಅನ್ನು ತಿನ್ನುವುದರಿಂದ ಏನಾಗುತ್ತದೆ ಗೊತ್ತಾ….?

ವೀಳ್ಯದೆಲೆ ಆರೋಗ್ಯಕ್ಕೆ ತುಂಬ ಉತ್ತಮ ಎಂಬುದು ಎಲ್ಲರಿಗೂ ತಿಳಿದಿದೆ. ವೀಳ್ಯದೆಲೆಯಲ್ಲಿ ಔಷಧೀಯ ಗುಣಗಳಿವೆ. ಹಾಗಾಗಿ ಇದನ್ನು ಮನೆಮದ್ದುಗಳಲ್ಲಿ ಬಳಸುತ್ತಾರೆ. ಆದರೆ ವೀಳ್ಯದೆಲೆಯನ್ನು ಅತಿಯಾಗಿ ಸೇವಿಸಬೇಡಿ. ಇದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು.

ವೀಳ್ಯದೆಲೆಯನ್ನು ಅತಿಯಾಗಿ ಸೇವಿಸಿದರೆ ಅಲರ್ಜಿ ಸಮಸ್ಯೆ ಕಾಡಬಹುದು. ಇದರಿಂದ ಚರ್ಮ ಕೆಂಪಾಗುವುದು, ದದ್ದು, ತುರಿಕೆ ಸಮಸ್ಯೆ ಕಾಡಬಹುದು.

ಹಾಗೇ ನೀವು ಹೆಚ್ಚು ವೀಳ್ಯದೆಲೆಯನ್ನು ಸೇವಿಸಿದರೆ ಅದರಿಂದ ಒಸಡುಗಳಿಗೆ ನೋವಾಗಬಹುದು.

ಅತಿಯಾಗಿ ವೀಳ್ಯದೆಲೆಯನ್ನು ಸೇವಿಸಿದರೆ ನಿಮಗೆ ಹೈಬಿಪಿ ಸಮಸ್ಯೆ ಕಾಡಬಹುದು. ಇದು ಅಧಿಕ ಹೃದಯ ಬಡಿತಕ್ಕೆ ಕಾರಣವಾಗಬಹುದು.

ಹೆಚ್ಚು ವೀಳ್ಯದೆಲೆ ಸೇವಿಸುವುದರಿಂದ ದೇಹದಲ್ಲಿ ಹಾರ್ಮೋನ್ ನಲ್ಲಿ ವ್ಯತ್ಯಾಸವಾಗಬಹುದು. ಇದರಿಂದ ಥೈರಾಯ್ಡ್ ಸಮಸ್ಯೆ ಕಾಡಬಹುದು.

Reduce High BP:ರಕ್ತದೊತ್ತಡವನ್ನು ಕಡಿಮೆ ಮಾಡಲು ಈ ಪಾನೀಯಗಳನ್ನು ಸೇವಿಸಿ…!

ಗರ್ಭಾವಸ್ಥೆಯಲ್ಲಿ ಹೆಚ್ಚು ವೀಳ್ಯದೆಲೆಯನ್ನು ಸೇವಿಸಿದರೆ ಭ್ರೂಣದ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...