Kannada Duniya

ಪೂರಿಗೆ ಸಾಥ್ ನೀಡುವ ರುಚಿಯಾದ ವೆಜ್ ಕುರ್ಮ!

ಪೂರಿ, ಚಪಾತಿ ಮಾಡಿದಾಗ ಕುರ್ಮ ಿದ್ದರೆ ಮಜಾನೇ ಬೇರೆ. ಹಾಗಂತ ಬೆಳಿಗ್ಗೆ ಈ ಕುರ್ಮ ಮಾಡುವುದಕ್ಕೆ ಸಮಯವಾದರೂ ಏಲ್ಲಿದೆ ಎಂದು ಚಿಂತೆ ಮಾಡುತ್ತಿದ್ದೀರಾ….? ಹಾಗಿದ್ರೆ ಇಲ್ಲಿದೆ ನೋಡಿ ಸುಲಭವಾಗಿ ಮಾಡಬಹುದಾದ ವೆಜ್ ಕುರ್ಮ.ಬಾಯಿ ಚಪ್ಪರಿಸಿಕೊಂಡು ಈ ಕುರ್ಮ ಸವಿಯುತ್ತೀರಿ ನೀವು.

ಬೇಕಾಗುವ ಸಾಮಗ್ರಿಗಳು

ಕ್ಯಾರೆಟ್-1, ಬೀನ್ಸ್-5, ಆಲೂಗಡ್ಡೆ-1, ಹೂ ಕೋಸು-1/2 ಕಪ್, ಲವಂಗ-3, ಏಲಕ್ಕಿ-2, ಚಕ್ಕೆ-½ ಇಂಚು, ಬೆಳ್ಳುಳ್ಳಿ-5 ಎಸಳು, ಶುಂಠಿ-½ ಇಂಚು, , ಜೀರಿಗೆ-½ ಟೀ ಸ್ಪೂನ್, ಸೋಂಪು-½ ಟೀ ಸ್ಪೂನ್, ಧನಿಯಾ ಬೀಜ-1 ಚಮಚ ಹಾಗೂ ಕಾಳುಮೆಣಸು-4, ಹಸಿಮೆಣಸು-3, ಗೋಡಂಬಿ- 6, ದೊಡ್ಡ ಈರುಳ್ಳಿ-2, ತೆಂಗಿನಕಾಯಿ ತುರಿ-¼ ಕಪ್, ಕೊತ್ತಂಬರಿಸೊಪ್ಪು-ಸ್ವಲ್ಪ,ಎಣ್ಣೆ-4 ಚಮಚ

ಮಾಡುವ ವಿಧಾನ

ಒಲೆಯ ಮೇಲೆ ಒಂದು ಬಾಣಲೆ ಇಟ್ಟು 2 ಚಮಚ ಎಣ್ಣೆ ಹಾಕಿ ಅದಕ್ಕೆ 3 ಲವಂಗ, 2 ಏಲಕ್ಕಿ, ½ ಇಂಚು ಚಕ್ಕೆ ಹಾಕಿ ನಂತರ 5 ಎಸಳು ಬೆಳ್ಳುಳ್ಳಿ, ½ ಇಂಚು ಶುಂಠಿ ಕತ್ತರಿಸಿ ಹಾಕಿ. ನಂತರ ½ ಟೀ ಸ್ಪೂನ್, ಜೀರಿಗೆ, ½ ಟೀ ಸ್ಪೂನ್ ಸೋಂಪು ಹಾಕಿ. ನಂತರ 1 ಚಮಚ ಧನಿಯಾ ಬೀಜ ಹಾಗೂ 4 ಕಾಳುಮೆಣಸು ಹಾಕಿ ತುಸು ಫ್ರೈ ಮಾಡಿ. ಬಳಿಕ 3 ಹಸಿಮೆಣಸು, 6 ಗೋಡಂಬಿ, 1 ದೊಡ್ಡ ಈರುಳ್ಳಿಯನ್ನು ಕತ್ತರಿಸಿ ಹಾಕಿ ತುಸು ಫ್ರೈ ಮಾಡಿ. ಬಳಿಕ 1 ಟೊಮೆಟೋವನ್ನು ಕತ್ತರಿಸಿ ಹಾಕಿ 5 ನಿಮಿಷಗಳ ಕಾಲ ಫ್ರೈ ಮಾಡಿ. ಇದು ತಣ್ಣಗಾದ ಬಳಿಕ ¼ ಕಪ್ ತೆಂಗಿನಕಾಯಿ ತುರಿ, ಕೊತ್ತಂಬರಿಸೊಪ್ಪು ಹಾಕಿ ಒಂದು ಮಿಕ್ಸಿ ಜಾರಿಗೆ ಸೇರಿಸಿ ತುಸು ನೀರು ಬೆರೆಸಿ ರುಬ್ಬಿಕೊಳ್ಳಿ.ಒಂದು ಪಾತ್ರೆಗೆ ನೀರು ಹಾಕಿ ಅದು ಕುದಿ ಬಂದ ಬಳಿಕ ಕತ್ತರಿಸಿದ ಕ್ಯಾರೆಟ್, ಆಲೂಗಡ್ಡೆ, ಹೂಕೋಸು, ಬೀನ್ಸ್ ಅನ್ನು ಹಾಕಿ 15 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಒಲೆಯ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 2 ಚಮಚ ಎಣ್ಣೆ ಹಾಕಿ ಅದು ಕಾದ ಬಳಿಕ 1 ಈರುಳ್ಳಿಯನ್ನು ಕತ್ತರಿಸಿ ಹಾಕಿ. ಇದು ಹೊಂಬಣ್ಣಕ್ಕೆ ಬಂದಾಗ ರುಬ್ಬಿದ ಮಸಾಲೆಯನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇದು ಕುದಿ ಬಂದ ಬಳಿಕ ತರಕಾರಿಯನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಕಿದ್ದರೆ ಸ್ವಲ್ಪ ನೀರು ಬೆರೆಸಿ ಕುದಿಸಿದರೆ ರುಚಿಯಾದ ಕುರ್ಮ ಸವಿಯಲು ರೆಡಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...