Kannada Duniya

ರಜಾ ದಿನಗಳನ್ನು ವಿಶೇಷವಾಗಿಸಲು ಕಾಶ್ಮೀರಿ ಪುಲಾವ್ ಮಾಡಿ ತಿನ್ನಿರಿ….!

ರಜಾದಿನಗಳಲ್ಲಿ ಪ್ರತಿಯೊಬ್ಬರು ಏನಾದರೂ ವಿಶೇಷವಾದ ಆಹಾರವನ್ನು ತಿನ್ನಲು ಬಯಸುತ್ತಾರೆ. ಅದರಲ್ಲೂ ಚಳಿಗಾಲದ ರಜಾದಿನಗಳಲ್ಲಿ ವಿಶೇಷವಾದ ಆಹಾರ ಸೇವಿಸಲು ಮಜಾ ಬರುತ್ತದೆ. ಹಾಗಾಗಿ ರಜಾದಿನಗಳಲ್ಲಿ ಕಾಶ್ಮೀರಿ ಪುಲಾವ್ ತಯಾರಿಸಿ ಸೇವಿಸಿ.

ಬೇಕಾಗುವ ಸಾಮಾಗ್ರಿಗಳು :
1ಕಪ್ ಬಾಸ್ಮಿತಿ ಅಕ್ಕಿ, 8 ಗೋಡಂಬಿ, 8 ಬಾದಾಮಿ, 1 ಚಮಚ ದಾಳಿಂಬೆ ಬೀಜಗಳು, ½ ಭಾಗ ಸೇಬು, 3 ಲವಂಗ, 1 ಇಂಚು ದಾಲ್ಚಿನ್ನಿ, 3 ಹಸಿರು ಏಲಕ್ಕಿ, 1 ಪುಲಾವ್ ಎಲೆ, 1 ಏಲಕ್ಕಿ, ½ ಚಮಚ ಕೆಂಪು ಮೆಣಸಿನ ಪುಡಿ, 1 ಚಮಚ ಸಕ್ಕರೆ, 1 ಚಮಚ ಕೇಸರಿ, ಉಪ್ಪು, ತುಪ್ಪ.

ಮೆಂತೆ ಸೊಪ್ಪಿನ ದೋಸೆ ಒಮ್ಮೆ ಸವಿದು ನೋಡಿ…..!

ಮಾಡುವ ವಿಧಾನ : ಬಾಸ್ಮತಿ ಅಕ್ಕಿಯನ್ನು ಸ್ವಚ್ಛಗೊಳಿಸಿ ನೀರಿನಲ್ಲಿ ½ ಗಂಟೆ ನೆನೆಸಿಡಿ. ನಂತರ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಲವಂಗ, ಪುಲಾವ್ ಎಲೆ, ದಾಲ್ಚಿನ್ನಿ, ಏಲಕ್ಕಿ ಸೇರಿಸಿ ಫ್ರೈ ಮಾಡಿ. ಬಳಿಕ ಕೆಂಪು ಮೆಣಸಿನ ಪುಡಿ, ಸಕ್ಕರೆ, ಕೇಸರಿ ಮತ್ತು ಉಪ್ಪನ್ನು ಬೆರೆಸಿ ಅದಕ್ಕೆ ನೆನೆಸಿಟ್ಟ ಬಾಸ್ಮತಿ ಅಕ್ಕಿಯನ್ನು ಹಾಕಿ. 2 ನಿಮಿಷಗಳ ಕಾಲ ಫ್ರೈ ಮಾಡಿ. ಅಕ್ಕಿಗೆ 2 ಕಪ್ ನೀರು ಸೇರಿಸಿ ಪ್ಯಾನ್ ಅನ್ನು 15 ನಿಮಿಷಗಳ ಕಾಲ ಮುಚ್ಚಿಡಿ. ಅಕ್ಕಿ ಬೆಂದಿದ್ದರೆ ಗ್ಯಾಸ್ ಆಫ್ಪ ಮಾಡಿ. ಈಗ ಬೇಯಿಸಿದ ಅನ್ನದಲ್ಲಿ ಬಾದಾಮಿ, ಗೋಡಂಬಿ, ದಾಳಿಂಬೆ, ಬೀಜಗಳು, ಸೇಬುವನ್ನು ಮಿಶ್ರಣ ಮಾಡಿದರೆ ಕಾಶ್ಮೀರಿ ಪುಲಾವ್ ರೆಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...