Kannada Duniya

ಹೆಲ್ಮೆಟ್ ನಿಂದ ಕೂದಲುದುರುವ ಸಮಸ್ಯೆ ಎದುರಿಸುತ್ತಿದ್ದೀರಾ….? ಇಲ್ಲಿದೆ ನೋಡಿ ಸೂಪರ್ ಟಿಪ್ಸ್!

ದಿನ ಹೆಲ್ಮೆಟ್ ಧರಿಸುವುದರ ಪರಿಣಾಮ ಕೂದಲು ಉದುರುತ್ತದೆ ಎಂದು ದೂರುವವರ ಪೈಕಿ ನೀವು ಒಬ್ಬರಾಗಿದ್ದರೆ ಈ ಕೆಲವು ಸಿಂಪಲ್ ಟಿಪ್ಸ್ ಗಳನ್ನು ಅನುಸರಿಸಿ ನೋಡಿ. ಇದರಿಂದ ನಿಮ್ಮ ಕೂದಲುದುರುವ ಸಮಸ್ಯೆ ನಿವಾರಣೆಯಾಗುತ್ತದೆ.

ಹೆಲ್ಮೆಟ್ ಧರಿಸಿದಾಗ ಕೂದಲು ಬೆವರುವುದರಿಂದ ತಲೆ ಹೊಟ್ಟಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಉದಯ ನಿವಾರಣೆಗೆ ಪ್ರತಿದಿನ ತಲೆಗೆ ಸ್ನಾನ ಮಾಡಿ ಹಾಗೂ ಕೂದಲಿನ ಬುಡವನ್ನು ಸ್ವಚ್ಛವಾಗಿಟ್ಟುಕೊಳ್ಳಿ.

ಒದ್ದೆ ಕೂದಲಿನ ಮೇಲೆ ಹೆಲ್ಮೆಟ್ ಧರಿಸುವ ತಪ್ಪನ್ನು ಮಾಡದಿರಿ. ತಲೆ ಸ್ನಾನ ಮಾಡಿದ ಬಳಿಕ ಕೂದಲನ್ನು ಚೆನ್ನಾಗಿ ಒಣಗಿಸಿಕೊಂಡೇ ಹೆಲ್ಮೆಟ್ ಧರಿಸಿ.

ತೆಳುವಾದ ಹತ್ತಿ ಬಟ್ಟೆಯನ್ನು ಅಥವಾ ಶಾಲನ್ನು ತಲೆಗೆ ಕಟ್ಟಿಕೊಂಡು ಅದರ ಮೇಲೆ ಹೆಲ್ಮೆಟ್ ಧರಿಸಿ. ಈ ಬಟ್ಟೆ ಬೆವರನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಹಾಗೂ ನಿಮ್ಮ ಕೂದಲಿಗೂ ಹೆಲ್ಮೆಟ್ ನ ಒಳಪದರಕ್ಕೂ ನೇರ ಸಂಪರ್ಕಕ್ಕೆ ಅವಕಾಶ ಕಲ್ಪಿಸುವುದಿಲ್ಲ.

ಕೂದಲಿನ ಕಿರುಚೀಲಗಳಿಗೆ ಸರಿಯಾಗಿ ಪೋಷಕಾಂಶ ದೊರೆಯುವಂತೆ ಮಾಡಲು ಎರಡು ದಿನಕ್ಕೊಮ್ಮೆಯಾದರೂ ತಲೆಗೆ ಎಣ್ಣೆ ಹಾಕಿ ಮಸಾಜ್ ಮಾಡಿ.
ಇದರಿಂದ ರಕ್ತ ಪರಿಚಲನೆ ಹೆಚ್ಚಿ ಕೂದಲು ಉದುರುವುದು ಕಡಿಮೆಗೊಳ್ಳುತ್ತದೆ. ಅದೇ ರೀತಿ ವಾರಕ್ಕೊಮ್ಮೆಯಾದರೂ ಹೆಲ್ಮೆಟ್ ಅನ್ನು ಸ್ವಚ್ಛಗೊಳಿಸಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...