
ಕೂದಲು ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಮಹಿಳೆಯರು ಚರ್ಮದ ಜೊತೆಗೆ ಕೂದಲಿನ ಆರೈಕೆಗೂ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಹಾಗಾಗಿ ನಿಮ್ಮ ಕೂದಲು ಉದ್ದವಾಗಿ ಆರೋಗ್ಯವಾಗಿ ಬೆಳೆಯಲು ರಾತ್ರಿಯ ವೇಳೆ ಈ ಕೆಲಸ ಮಾಡಿ.
ರಾತ್ರಿ ವೇಳೆ ಮಲಗುವಾಗ ಕೂದಲನ್ನು ಬಾಚಿಕೊಳ್ಳಿ. ಇದರಿಂದ ನೆತ್ತಿಯಲ್ಲಿ ರಕ್ತಪರಿಚಲನೆಯಾಗಿ ಕೂದಲಿನ ಬುಡಕ್ಕೆ ಆಮ್ಲಜನಕ ದೊರೆಯುತ್ತದೆ. ಇದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.
ರಾತ್ರಿಯ ವೇಳೆ ಕೂದಲಿಗೆ ಬಿಗಿಯಾಗಿ ಕಟ್ಟಿಕೊಳ್ಳಬೇಡಿ. ಇದರಿಂದ ನೆತ್ತಿಯಲ್ಲಿ ನೋವು ಉಂಟಾಗಿ ಕೂದಲಿನ ಬುಡ ದುರ್ಬಲವಾಗುತ್ತದೆ. ಹಾಗಾಗಿ ಕೂದಲನ್ನು ಸಡಿಲವಾಗಿ ಕಟ್ಟಿಕೊಳ್ಳಿ. ಇದರಿಂದ ಕೂದಲು ವೇಗವಾಗಿ ಬೆಳೆಯಲು ಸಹಾಯವಾಗುತ್ತದೆ.
ತ್ವಚೆಯ ಕಾಂತಿಯನ್ನು ಹೆಚ್ಚಿಸಲು ದಾಸವಾಳ ಹೂವಿನಿಂದ ಈ ಫೇಸ್ ಪ್ಯಾಕ್ ತಯಾರಿಸಿ ಹಚ್ಚಿ….!
ರಾತ್ರಿಯ ವೇಳೆ ಒದ್ದೆಯಾದ ಕೂದಲಿನೊಂದಿಗೆ ಮಲಗಬೇಡಿ. ಇದರಿಂದ ಕೂದಲಿನ ಬುಡ ದುರ್ಬಲವಾಗುತ್ತದೆ. ಹಾಗಾಗಿ ಕೂದಲನ್ನು ಸಮಪೂರ್ಣವಾಗಿ ಒಣಗಿಸಿಕೊಂಡು ಮಲಗಿರಿ.