
ಪ್ರತಿ ಋತುಮಾನದಲ್ಲಿ ಚರ್ಮದ ಆರೈಕೆ ಬಹಳ ಮುಖ್ಯ. ಇಲ್ಲವಾದರೆ ಚರ್ಮವು ಅನಾರೋಗ್ಯಕ್ಕೊಳಗಾಗುತ್ತದೆ. ಚರ್ಮದ ಅಲರ್ಜಿ, ಸುಕ್ಕುಗಳು ಕಂಡುಬರುತ್ತದೆ. ಅದಕ್ಕಾಗಿ ಕೆಲವರು ಅಲೋವೆರಾ ಮತ್ತು ಬೇವನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುತ್ತಾರೆ. ಇದರಿಂದ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಅಲೋವೆರಾ ಮತ್ತು ಬೇವು ಚರ್ಮವನ್ನು ಒಳಗಿನಿಂದ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದು ಚರ್ಮದಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕುವುದು ಮಾತ್ರವಲ್ಲ ಮೊಡವೆ ಮತ್ತು ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ.
ಚರ್ಮದ ನೈಸರ್ಗಿಕ ತೇವಾಂಶವನ್ನು ಉಳಿಸಿಕೊಳ್ಳಲು ಅಲೋವೆರಾ ಬಹಳ ಪ್ರಯೋಜನಕಾರಿ. ಏಕೆಂದರೆ ಇದು ನೀರಿನ ಗುಣವನ್ನು ಹೊಂದಿದೆ. ಇದು ಚರ್ಮವನ್ನು ನಿರ್ಜಲೀಕರಣದಿಂದ ರಕ್ಷಿಸುತ್ತದೆ.
ಯಾವುದೇ ರೀತಿಯ ಸೋಂಕನ್ನು ತಪ್ಪಿಸಲು ಬೇವು ಬಹಳ ಪರಿಣಾಮಕಾರಿ. ಶಿಲೀಂಧ್ರ ವಿರೋಧಿ , ಬ್ಯಾಕ್ಟೀರಿಯಾ ವಿರೋಧಿ ಮತ್ತು ವೈರಾಣು ವಿರೋಧಿ ಗುಣಗಳಿಂದಾಗ ಬೇವನ್ನು ಚರ್ಮದ ಆರೈಕೆಯಲ್ಲಿ ಬಳಸುತ್ತಾರೆ.
ಸ್ನಾನ ಮಾಡುವಾಗ ನೀರಿಗೆ ಈ ಎರಡು ಎಲೆಗಳನ್ನು ಮಿಕ್ಸ್ ಮಾಡಿದರೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ
ಮಾಲಿನ್ಯ ಹೆಚ್ಚಾಗಿರುವ ಪ್ರದೇಶದಲ್ಲಿ ವಾಸಿಸುವವರು ಅಲೋವೆರಾ ಮತ್ತು ಬೇವನ್ನು ಚರ್ಮಕ್ಕೆ ಬಳಸಿ. ಬೇವಿನ ನೀರಿನಿಂದ ಮುಖವನ್ನು ವಾಶ್ ಮಾಡಿ ಅಲೋವೆರಾ ವನ್ನು ಮುಖಕ್ಕೆ ಹಚ್ಚಿ.