Kannada Duniya

ಚರ್ಮಕ್ಕೆ ಹೆಚ್ಚು ಉತ್ತಮ ಯಾವುದು ಗೊತ್ತಾ ಗ್ರೀನ್ ಟೀ ಮತ್ತು ಕಾಫಿಯಲ್ಲಿ…?

ಗ್ರೀನ್ ಟೀ ಮತ್ತು ಕಾಫಿ ಎರಡೂ ಆರೋಗ್ಯಕ್ಕೆ ತುಂಬಾ ಉತ್ತಮ. ಎರಡು ತನ್ನದೇ ಆದ ಆರೋಗ್ಯ ಪ್ರಯೋಜನವನ್ನು ಹೊಂದಿದೆ. ಆದರೆ ಇವೆರಡರಲ್ಲಿ ಚರ್ಮಕ್ಕೆ ಯಾವುದು ಉತ್ತಮ ಎಂಬ ಗೊಂದಲ ಹಲವರಲ್ಲಿದೆ. ಅದಕ್ಕೆ ಉತ್ತರ ಇಲ್ಲಿದೆ.

ಗ್ರೀನ್ ಟೀ ನೀವು ಯಂಗ್ ಆಗಿ ಕಾಣುವಂತೆ ಮಾಡುತ್ತದೆ. ನಿಮ್ಮ ಚರ್ಮದಲ್ಲಿರುವ ಸುಕ್ಕುಗಳು ಮತ್ತು ನೆರಿಗೆಗಳನ್ನು ನಿವಾರಿಸುತ್ತದೆ. ಹಾಗೇ ಮೊಡವೆಗಳು, ಚರ್ಮ ಕೆಂಪಾಗುವುದು, ತುರಿಕೆಯನ್ನು ಕಡಿಮೆ ಮಾಡುತ್ತದೆ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ.

ಕಾಫಿ ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಉರಿಯೂತವನ್ನು ಕಡಿಮೆ ಮಾಡುತ್ತದೆ. ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಸುಕ್ಕುಗಳು ಬರದಂತೆ ತಡೆಯುತ್ತದೆ. ಕಾಲಜನ್ ನಿಂದ ಉಂಟಾಗುವ ಹಾನಿಯನ್ನು ತಪ್ಪಿಸುತ್ತದೆ.

Glowing Skin: ಹೊಳೆಯುವ ಚರ್ಮವನ್ನು ಪಡೆಯಲು ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿ…!

ಹಾಗಾಗಿ ಗ್ರೀನ್ ಮತ್ತು ಕಾಫಿ ಎರಡೂ ಕೂಡ ಚರ್ಮದ ಆರೋಗ್ಯಕ್ಕೆ ಉತ್ತಮವೇ. ಆದರೆ ಗ್ರೀನ್ ಟೀಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು ಹೆಚ್ಚು ಪರಿಣಾಮಕಾರಿಯಾಗಿದ್ದು, ಇದು ಫ್ರೀ ರಾಡಿಕಲ್ಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರಿಂದ ನಿಮಗೆ ಬೇಗ ವಯಸ್ಸಾಗುವುದನ್ನು ತಡೆಯಬಹುದು. ಹಾಗಾಗಿ ಗ್ರೀನ್ ಟೀ ಸೇವಿಸುವುದು ಉತ್ತಮ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...