Kannada Duniya

ಕೂದಲುದುರುವುದನ್ನು ತಡೆಯಲು ಈ ಯೋಗಾಸನ ಮಾಡಿ

ವಾತಾವರಣದ ಮಾಲಿನ್ಯ ಕೊಳೆ, ಧೂಳಿನಿಂದಾಗಿ ಚರ್ಮ ಮಾತ್ರವಲ್ಲ ಕೂದಲಿನ ಸಮಸ್ಯೆಗಳು ಕಾಡುತ್ತದೆ. ಅದರಲ್ಲೂ ಕೂದಲುದುರುವ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಹಾಗಾಗಿ ಈ ಕೂದಲುದುರುವ ಸಮಸ್ಯೆಯನ್ನು ಹೋಗಲಾಡಿಸಲು ಈ ಯೋಗಾಸನ ಅಭ್ಯಾಸ ಮಾಡಿ.

ಶಿರ್ಶಾಸನ : ನಿಮ್ಮ ಮುಂದೋಳುಗಳನ್ನು ನೆಲದ ಮೇಲೆ ಇರಿಸಿ ನಿಮ್ಮ ಬೆರಳುಗಳನ್ನು ಇಂಟರ್ ಲಾಕ್ ಮಾಡಿ. ಮೊಣಕೈಯನ್ನು ಭುಜದ ಅಗಲಕ್ಕಿಂತ ಸ್ವಲ್ಪ ಹೆಚ್ಚು ಹರಡಿ. ನಿಮ್ಮ ಅಂಗೈಯ ನಡುವಿನ ಜಾಗವನ್ನು ತಲೆಯ ಕಿರೀಟದಂತೆ ಇರಿಸಿ. ನಿಮ್ಮ ಪೃಷ್ಠವನ್ನು ನೆಲದಿಂದ ಮೇಲಕ್ಕೆತ್ತಿ. ಮೊಣಕಾಲು ಮತ್ತು ಕಾಲುಗಳನ್ನು ನೇರವಾಗಿರಿಸಿ.ಇದು ನೆತ್ತಿಯಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ಇದರಿಂದ ಕೂದಲುದುರುವ ಸಮಸ್ಯೆ ಕಾಡುವುದಿಲ್ಲ.

ಸರ್ವಂಗಾಸನ : ಯೋಗ ಚಾಪೆಯ ಮೇಲೆ ಮಲಗಿಕೊಳ್ಳಿ. ನಿಮ್ಮ ಎರಡು ಪಾದಗಳ ಬೆರಳುಗಳನ್ನು ಜೋಡಿಸಿ, ಎರಡೂ ಕಾಲುಗಳನ್ನು ಒಟ್ಟಿಗೆ ಮೇಲಕ್ಕೆ ಎತ್ತಲು ಪ್ರಯತ್ನಿಸಿ. ಅಂಗೈಗಳಿಂದ ಸೊಂಟವನ್ನು ಹಿಡಿದುಕೊಳ್ಳಿ. ಮತ್ತು ಪಾದಗಳನ್ನು ಮೇಲಕ್ಕೆತ್ತಿ ಮತ್ತು ಎಷ್ಟು ಮೇಲಕ್ಕೆ ಎತ್ತಲೂ ಸಾಧ್ಯವೋ ಅಷ್ಟು ಮೇಲೆ ಎತ್ತಿ. ನಿಮ್ಮ ಇಡೀ ದೇಹದ ಭಾರವು ಭುಜಗಳ ಮೇಲೆ ಮಾತ್ರ ಇರಬೇಕು. ಸ್ವಲ್ಪ ಸಮಯ ಈ ಸ್ಥಾನದಲ್ಲಿ ಇರಿ. ಬಳಿಕ ಕಾಲುಗಳನ್ನು ಹಿಂದಕ್ಕೆ ತಂದು ಮೊದಲಿನ ಸ್ಥಿತಿಗೆ ಬನ್ನಿ.ಇದು ತಲೆಯಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ಇದು ಕೂದಲಿಗೆ ಪೋಷಣೆಯನ್ನು ನೀಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...