Kannada Duniya

ಕುತ್ತಿಗೆಯಲ್ಲಿ ಮೂಡಿದ ಸುಕ್ಕುಗಳನ್ನು ನಿವಾರಿಸಲು ಈ ಕ್ರಮ ಪಾಲಿಸಿ

ವಯಸ್ಸಾದಂತೆ ಚರ್ಮದಲ್ಲಿ ಸುಕ್ಕುಗಳು ಮೂಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ಮೊಬೈಲ್, ಲ್ಯಾಪ್ ಟಾಪ್ ಗಳನ್ನು ಬಲಸುವುದರಿಂದ ಅದರ ನೀಲಿ ಬೆಳಕಿನಿಂದ ಚರ್ಮ ಬೇಗನೆ ಸುಕ್ಕುಗಟ್ಟುತ್ತದೆ. ಅದರಲ್ಲೂ ಕುತ್ತಿಗೆಯ ಭಾಗದಲ್ಲಿ ಸುಕ್ಕುಗಳು ಬೇಗನೆ ಮೂಡುತ್ತದೆ. ಹಾಗಾಗಿ ಈ ಸುಕ್ಕುಗಳನ್ನು ನಿವಾರಿಸಲು ಈ ಕ್ರಮ ಪಾಲಿಸಿ.

ಕುತ್ತಿಗೆಯ ಭಾಗಕ್ಕೆ ವಿಟಮಿನ್ ಸಿ ಸೀರಮ್ ಅನ್ನು ಹಚ್ಚಿ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿವೆ. ಇದು ಫ್ರೀ ರಾಡಿಕಲ್ಸ್ ಗಳಿಂದಾಗುವ ಹಾನಿಯನ್ನು ತಪ್ಪಿಸುತ್ತದೆ. ಮತ್ತು ನೀಲಿ ಬೆಳಕಿನಿಂದಾಗುವ ಹಾನಿಯನ್ನು ತಡೆಯುತ್ತದೆ.

ಹಾಗೇ ಪ್ರತಿದಿನ ಸನ್ ಸ್ಕ್ರೀನ್ ಅನ್ನು ಬಳಸಿ. ಇದು ಚರ್ಮದಲ್ಲಿರುವ ಸೂಕ್ಷ್ಮ ಗೆರೆಗಳನ್ನು ನಿವಾರಿಸುತ್ತದೆ. ಮತ್ತು ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮದ ಮೇಲಾಗುವ ಹಾನಿಯನ್ನು ತಪ್ಪಿಸುತ್ತದೆ. ಮತ್ತು ಇದು ಚರ್ಮವನ್ನು ಮೃದುವಾಗಿಸುತ್ತದೆ.

ಚರ್ಮಕ್ಕೆ ನಿಯಮಿತವಾಗಿ ಮಾಯಿಶ್ಚರೈಸರ್ ಅನ್ನು ಹಚ್ಚಿ. ಅದರಲ್ಲೂ ಹೈಲುರೊನಿಕ್ ಆಮ್ಲವನ್ನು ಹೊಂದಿರುವಂತಹ ಮಾಯಿಶ್ಚರೈಸರ್ ಕ್ರೀಂ ಅನ್ನು ಹಚ್ಚಿ. ಅದರ ಜೊತೆಗೆ ವಿಟಮಿನ್ ಎ ಸಮೃದ್ಧವಾಗಿರುವ ರೆಟಿನಾಲ್ ಗಳನ್ನು ಬಳಸಿ. ಇದು ಆ್ಯಂಟಿ ಏಜಿಂಗ್ ಆಗಿರುವ ಕಾರಣ ಸುಕ್ಕುಗಳನ್ನು ನಿವಾರಿಸುತ್ತದೆ. ಚರ್ಮವನ್ನು ಬಿಗಿಗೊಳಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...