Kannada Duniya

ಈ ಮನೆಮದ್ದುಗಳು ಕೂದಲು ಬಹಳ ವೇಗವಾಗಿ ಬೆಳೆಯಲು ಸಹಾಯ ಮಾಡುತ್ತವೆಯಂತೆ….!

ಚಳಿಗಾಲದಲ್ಲಿ ಹೆಚ್ಚಾಗಿ ಕೂದಲುದುರುವ ಸಮಸ್ಯೆಗಳು ಕಾಡುತ್ತದೆ. ಅಲ್ಲದೇ ವಾತಾವರಣದ ಶುಷ್ಕ ಗಾಳಿಯಿಂದಾಗಿ ಕೂದಲು ಬೇಗ ಒಣಗಿ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಇದರಿಂದ ಕೂದಲಿನ ಬೆಳವಣಿಗೆ ನಿಧಾನವಾಗುತ್ತದೆ. ಹಾಗಾಗಿ ನಿಮ್ಮ ಬಹಳ ವೇಗವಾಗಿ ಬೆಳೆಯಲು ಈ ಮನೆಮದ್ದನ್ನು ಬಳಸಿ.

ಮೊಟ್ಟೆಯ ಹೇರ್ ಪ್ಯಾಕ್ : ಇದರಲ್ಲಿ ಪ್ರೋಟೀನ್ ಅಂಶ ಸಮೃದ್ಧವಾಗಿದೆ. ಹಾಗಾಗಿ ಕೂದಲಿಗೆ ಮೊಟ್ಟೆಯ ಹೇರ್ ಪ್ಯಾಕ್ ಹಚ್ಚಿ. ಇದನ್ನು ತಯಾರಿಸಲು ಮೊಟ್ಟೆಗೆ ಆಲಿವ್ ಆಯಿಲ್, ಜೇನುತುಪ್ಪ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 20 ನಿಮಿಷ ಬಿಟ್ಟು ಕೂದಲನ್ನು ತೊಳೆಯಿರಿ.

ಮೆಂತ್ಯಪ್ಯಾಕ್ : ಇದು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಹಾಗಾಗಿ ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೆನೆಸಿಟ್ಟು ಬೆಳಿಗ್ಗೆ ರುಬ್ಬಿ ಪೇಸ್ಟ್ ತಯಾರಿಸಿ ಕೂದಲಿಗೆ ಹಚ್ಚಿ.

ರಾತ್ರಿಯ ವೇಳೆ ಈ ರೋಗ ಲಕ್ಷಣಗಳು ಕಂಡುಬಂದರೆ ಮಧುಮೇಹವಿದೆ ಎಂಬುದನ್ನು ತಿಳಿಯಿರಿ

ನೆಲ್ಲಿಕಾಯಿ : ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾಗಿ ನೆಲ್ಲಿಕಾಯಿ ಪುಡಿಗೆ ಈರುಳ್ಳಿ ರಸವನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 20 ನಿಮಿಷ ಬಿಟ್ಟು ಕೂದಲನ್ನು ತೊಳೆಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...