Kannada Duniya

ತಂದೆಯಾಗುವ ಆಸೆ ಇರುವ ಪುರುಷರು ಇದನ್ನು ಓದಲೇಬೇಕು….!

ತಂದೆಯಾಗುವ ಆಸೆ ಇದೆ. ಆದರೆ ಅದು ಸಾಧ್ಯವಾಗ್ತಾ ಇಲ್ಲ ಎನ್ನುವ ಪುರುಷರು ಇದನ್ನು ಓದಲೇ ಬೇಕು. ಅಧ್ಯಯನವೊಂದು ತಂದೆಯಾಗಲು ಯಾವ ರೀತಿ ಮಲಗಬೇಕು ಎನ್ನುವ ಬಗ್ಗೆ ಸಂಶೋಧನೆ ನಡೆಸಿದೆ.

ಅಧ್ಯಯನದ ಪ್ರಕಾರ ಬಟ್ಟೆ ಇಲ್ಲದೆ ಅಥವಾ ಸಡಿಲ ಒಳ ಉಡುಪು ಧರಿಸಿ ರಾತ್ರಿ ನಿದ್ದೆ ಮಾಡಬೇಕಂತೆ. ಹಾಗೆ ಮಲಗುವುದರಿಂದ ಶೇಕಡಾ 25 ರಷ್ಟು ವೀರ್ಯ ಹಾಳಾಗುವುದು ತಪ್ಪುತ್ತದೆ.  ಜನನಾಂಗಕ್ಕೆ ಹೋಗುವ ತಣ್ಣನೆಯ ಗಾಳಿ ವೀರ್ಯವನ್ನು ರಕ್ಷಿಸುವ ಕೆಲಸ ಮಾಡುತ್ತದೆ ಎಂದು ಅಧ್ಯಯನ ಹೇಳುತ್ತದೆ.

ನಿಮ್ಮ ಲೈಂಗಿಕತೆ ಆಹ್ಲಾದಕರವಾಗಿರಲು ಏನು ಮಾಡಬೇಕು….?

ಯುನೈಟೆಡ್ ಸ್ಟೇಟ್ಸ್ ಆರೋಗ್ಯ ಮತ್ತು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ವಿಜ್ಞಾನಿಗಳು 501 ಪುರುಷರ ಮೇಲೆ ಈ ಪ್ರಯೋಗ ಮಾಡಿದ್ದಾರೆ. ತಂದೆಯಾಗಲು ಬಯಸಿದ್ದ ಪುರುಷರಿಗೆ ರಾತ್ರಿ ಹಾಗೇ ಮಲಗಲು ಹಾಗೂ ಬೆಳಗ್ಗೆ ಸಡಿಲ ಒಳ ಒಡುಪು ಧರಿಸಲು ಹೇಳಿದ್ದಾರೆ. ಬೆಳಿಗ್ಗೆ ಬಿಗಿಯಾದ ಒಳ ಉಡುಪು ಧರಿಸಿದ್ದವರಿಗಿಂತ ಇವರ ವೀರ್ಯ ಶೇಕಡಾ 25 ರಷ್ಟು ಕಡಿಮೆ ಹಾನಿಗೊಳಗಾಗಿದೆ. ವೀರ್ಯ ಹಾನಿಗೊಳಗಾಗಲು ಉಷ್ಣತೆಯೇ ಕಾರಣ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...