Kannada Duniya

ನೋಟು ಮುಟ್ಟಿದರೂ ಬರುತ್ತಂತೆ ಕಾಯಿಲೆ…!

ಕಾಯಿಲೆ, ರೋಗಗಳು ಹರಡುವುದು ಸೊಳ್ಳೆ, ಇಲ್ಲವೇ ಕಲುಷಿತ ಗಾಳಿ, ನೀರಿನಿಂದ. ಮತ್ತೆ ಕೆಲವು ಕಾಯಿಲೆಗಳು ರೋಗಿ ಕೆಮ್ಮಿದಾಗ, ಸೀನಿದಾಗ ಆರೋಗ್ಯವಂತರಿಗೂ ಹರಡುತ್ತವೆ. ನಾವೂ ಕೂಡ ಇದನ್ನೇ ನಂಬಿದ್ದೇವೆ. ಆದರೆ ಕರೆನ್ಸಿ ನೋಟಿನಿಂದಲೂ ಕಾಯಿಲೆ ಬರುತ್ತದೆ ಎಂದರೆ ನೀವು ನಂಬಲೇಬೇಕು.

ಕರೆನ್ಸಿ ನೋಟುಗಳಲ್ಲಿ ಹಲವಾರು ಕಾಯಿಲೆಗಳನ್ನು ಹರಡುವ ಸೂಕ್ಷ್ಮಾಣು ಜೀವಿಗಳು ಇರುವುದಾಗಿ ಅಧ್ಯಯನವೊಂದು ವರದಿ ನೀಡಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಹೇಳಿದೆ. ಕ್ಷಯ, ಅತಿಸಾರ, ಹುಣ್ಣು ಮೊದಲಾದ ಕಾಯಿಲೆಗಳನ್ನು ಹರಡುವ ಸೂಕ್ಷ್ಮಾಣು ಜೀವಿಗಳು ಹಲವು ನೋಟುಗಳಲ್ಲಿ ಕಂಡುಬಂದಿವೆ. ನೋಟುಗಳನ್ನು ಅಧ್ಯಯಕ್ಕೆ ಒಳಪಡಿಸಿದಾಗ ಅವುಗಳಲ್ಲಿ ಶಿಲೀಂದ್ರ ಮತ್ತು ಬ್ಯಾಕ್ಟೀರಿಯಾ ಪತ್ತೆಯಾಗಿವೆ. ಮಾತ್ರವಲ್ಲ ಇವುಗಳಲ್ಲಿ ಸುಮಾರು 78 ಕಾಯಿಲೆಗಳಿಗೆ ಸಂಬಂಧಿಸಿದ ಡಿಎನ್ಎ ಕುರುಹು ಕಂಡು ಬಂದಿರುವುದಾಗಿ ಅಧ್ಯಯನದಲ್ಲಿ ತಿಳಿಸಲಾಗಿದೆ.

ಇನ್ಸ್ಟಿಟ್ಯೂಟ್ ಆಫ್ ಜಿನೊಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ ವಿಜ್ಞಾನಿಗಳು ಎಸ್. ರಾಮಚಂದ್ರನ್ ಅವರ ನೇತೃತ್ವದಲ್ಲಿ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಸಹಯೋಗದಲ್ಲಿ ಈ ಕುರಿತು ಅಧ್ಯಯನ ನಡೆಸಿತ್ತು. ಅಧ್ಯಯನಕ್ಕಾಗಿ ದೆಹಲಿಯ ಸ್ಥಳೀಯ ವ್ಯಾಪಾರಿಗಳು, ಕಿರಾಣಿ ಅಂಗಡಿ, ಬೀದಿ ವ್ಯಾಪಾರಿಗಳಿಂದ ನೋಟುಗಳನ್ನು ಸಂಗ್ರಹಿಸಿ ಬಳಸಿಕೊಳ್ಳಲಾಗಿತ್ತು.

ಆನ್‌ಲೈನ್‌ನಲ್ಲಿ ಹೆಚ್ಚಿನ ಸುದ್ದಿಗಳಿಗಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಆನಂದಿಸಿ !!!


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...